ಮಾಸ್ಕೋ:ವಿಷ ಪ್ರಾಶನ ಸೇವಿರುವ ಶಂಕೆಯ ಹಿನ್ನೆಲೆಯಲ್ಲಿ ರಷ್ಯಾ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರು ಬರ್ಲಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜರ್ಮನ್ ಚಾನ್ಸಲರ್ ಏಜೆಂಲಾ ಮಾರ್ಕೆಲ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ನವಾಲ್ನಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ರಷ್ಯಾ ವಿಪಕ್ಷ ನಾಯಕ ನವಾಲ್ನಿ ರಹಸ್ಯ ಭೇಟಿ ಮಾಡಿದ ಜರ್ಮನಿ ಚಾನ್ಸಲರ್ ಮಾರ್ಕೆಲ್!? - ಬರ್ಲಿನ್ ಆಸ್ಪತ್ರೆಯಲ್ಲಿರುವ ನವಾಲ್ನಿ
ರಷ್ಯಾ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರನ್ನು ಜರ್ಮನಿಯ ಏಜೆಂಲಾ ಮಾರ್ಕೆಲ್ ರಹಸ್ಯವಾಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಇದು ರಹಸ್ಯ ಭೇಟಿಯಲ್ಲ ಎಂದು ನವಾಲ್ನಿ ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳೆದ 32 ದಿನಗಳಿಂದ ಚರೈಟ್ ಆಸ್ಪತ್ರೆಯಲ್ಲಿ ಅಲೆಕ್ಸಿ ನವಾಲ್ನಿ ಚಿಕಿತ್ಸೆ ಪಡೆಯುತ್ತಿದ್ದು, ಜರ್ಮನಿಯ ಏಜೆಂಲಾ ಮಾರ್ಕೆಲ್ ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಟ್ಟಿಟರ್ನಲ್ಲಿ ಸ್ಪಷ್ಟನೆ ನೀಡಿರುವ ನವಾಲ್ನಿ, ಏಜೆಂಲಾ ಮಾರ್ಕೆಲ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಆದರೆ, ಇದು ಯಾವುದೇ ರೀತಿಯ ರಹಸ್ಯವಲ್ಲ ಎಂದಿದ್ದಾರೆ.
ಇದೊಂದು ಖಾಸಗಿ ಭೇಟಿಯಾಗಿದ್ದು, ಕುಟುಂಬದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನನ್ನನ್ನು ಭೇಟಿ ಮಾಡಿದ್ದಕ್ಕೆ ಚಾನ್ಸಲರ್ ಮಾರ್ಕೆಲ್ ಅವರಿಗೆ ಕೃತಜ್ಞತನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.