ಕರ್ನಾಟಕ

karnataka

ETV Bharat / international

'ದ್ವೇಷವನ್ನು ಸಹಿಸಿಕೊಳ್ಳಬೇಡಿ': ಬೀಳ್ಕೊಡುಗೆ ಸಮಾರಂಭದಲ್ಲಿ ಜರ್ಮನ್ ಚಾನ್ಸೆಲರ್​ ಮರ್ಕೆಲ್

ಏಂಜೆಲಾ ಮರ್ಕೆಲ್ ಚಾನ್ಸೆಲರ್ ಆಗಿ 16 ವರ್ಷಗಳನ್ನು ಪೂರೈಸಿ, ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಮರ್ಕೆಲ್ ನೆಚ್ಚಿನ ಗೀತೆಗಳನ್ನು ನುಡಿಸಲಾಯಿತು.

Angela Merkel at farewell ceremony: Don't tolerate hate
ದ್ವೇಷವನ್ನು ಸಹಿಸಿಕೊಳ್ಳಬೇಡಿ: ಬೀಳ್ಕೊಡುಗೆ ಸಮಾರಂಭದಲ್ಲಿ ಜರ್ಮನ್ ಚಾನ್ಸೆಲರ್​ ಏಜೆಂಲಾ ಮರ್ಕೆಲ್ ಕರೆ

By

Published : Dec 3, 2021, 8:01 AM IST

ಬರ್ಲಿನ್(ಜರ್ಮನಿ): 'ಪ್ರಜಾಪ್ರಭುತ್ವವು ಎಲ್ಲರ ಹಿತಾಸಕ್ತಿಯನ್ನು ರಕ್ಷಿಸುವ ನ್ಯಾಯಸಮ್ಮತ ಸಾಧನವಾಗಿರಬೇಕು. ನಾವು ಪ್ರಜಾಪ್ರಭುತ್ವವಾದಿಗಳಾಗಿ ನಮ್ಮ ಸಹಿಷ್ಣುತೆಗೂ ಮಿತಿಯನ್ನು ಕಂಡುಕೊಳ್ಳಬೇಕು. ಎಲ್ಲಾ ಜರ್ಮನ್ನರು ದ್ವೇಷದ ವಿರುದ್ಧ ಹೋರಾಡಬೇಕು' ಎಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಕರೆ ನೀಡಿದರು.

ಚಾನ್ಸೆಲರ್ ಆಗಿ ಏಂಜೆಲಾ ಮರ್ಕೆಲ್ 16 ವರ್ಷಗಳನ್ನು ಪೂರೈಸಿ, ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಮಿಲಿಟರಿ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಮಾರಂಭದಲ್ಲಿ ಬಲಪಂಥೀಯ ನಾಯಕರನ್ನು ಹೊರತುಪಡಿಸಿ ಜರ್ಮನಿಯ ಬಹುತೇಕ ಎಲ್ಲಾ ಗಣ್ಯರು ಹಾಜರಾಗಿದ್ದರು. ಬಲಪಂಥೀಯ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ.

ಮುಂದಿನ ವಾರ ಸೋಶಿಯನ್ ಡೆಮಾಕ್ರಟಿಕ್ ಪಕ್ಷದ ಓಲಾಫ್ ಶೋಲ್ಜ್​ ಜರ್ಮನಿಯ ಹೊಸ ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲಿಯವರೆಗೆ ಹಂಗಾಮಿ ಚಾನ್ಸೆಲರ್ ಆಗಿ ಏಂಜೆಲಾ ಮರ್ಕೆಲ್​ ಮುಂದುವರೆಯಲಿದ್ದಾರೆ.

ಇದನ್ನೂ ಓದಿ:ಮೈಸೂರು ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್​ಗೆ ಐಎಂಎಫ್​ನಲ್ಲಿ ಬಡ್ತಿ

ABOUT THE AUTHOR

...view details