ಕರ್ನಾಟಕ

karnataka

ETV Bharat / international

ಮೀನು ಗಾಳಕ್ಕೆ ಬಿದ್ದಾಗ ಖುಷಿಪಡಬೇಕಿದ್ದ ಯುವಕ ಬೆಚ್ಚಿಬಿದ್ದ... ಕಾರಣ? -

ದೊಡ್ಡ-ದೊಡ್ಡ ಕಣ್ಣು, ಉದ್ದನೆಯ ಬಾಲ ಹೊಂದಿರುವ ಈ ಮೀನು ಗ್ರಹಾಂತರ ಜೀವಿಯನ್ನು ಹೋಲುವಂತಿದೆ. ಈ ಮೀನು ನೋಡಿದವರಿಗೆ ಭಯ ಹುಟ್ಟಿಸುವಂತಿದೆ.

ಕೃಪೆ: Facebook

By

Published : Sep 18, 2019, 5:53 PM IST

ಉತ್ತರ ನಾರ್ವೆ:ಅಂಡೋಯಾ ದ್ವೀಪ ಸಮೀಪದಲ್ಲಿ 19 ವರ್ಷದ ಯುವಕ ಹಾಕಿದ್ದ ಗಾಳಕ್ಕೆ ವಿಚಿತ್ರ ಮೀನೊಂದು ಸಿಕ್ಕಿಬಿದ್ದಿದೆ. ಮೀನು ಗಾಳಕ್ಕೆ ಬೀಳುತ್ತಿದ್ದಂತೆ ಖುಷಿ ಪಡಬೇಕಿದ್ದ ಆ ಯುವಕ ಅದನ್ನು ನೋಡಿ ಭಯಪಟ್ಟಿದ್ದಾನೆ. ಆ ಮೀನು ಗ್ರಹಾಂತರ ಜೀವಿಯಂತೆ ಕಾಣುತ್ತಿರುವುದು ಆತನ ಭಯಕ್ಕೆ ಕಾರಣವಾಗಿದೆ.

ಹೌದು, ಉದ್ದನೆಯ ಬಾಲ, ದೊಡ್ಡ-ದೊಡ್ಡ ಕಣ್ಣು ಹೊಂದಿರುವ ಆ ಮೀನು ಆಸ್ಕರ್​ ಲುಂಧಾಲ್​ ಎಂಬ ಮೀನುಗಾರ ಹಾಕಿದ್ದ ಗಾಳದಲ್ಲಿ ಸಿಲುಕಿತ್ತು. ಈ ಮೀನನ್ನು ನೋಡಿದ ಆ ಯುವಕ ಒಂದು ಕ್ಷಣ ಭಯಭೀತನಾಗಿ ಸಮುದ್ರಕ್ಕೆ ಹಾರಲು ಮುಂದಾಗಿದ್ದನಂತೆ. ಬಳಿಕ ಅದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಇನ್ನು ಈ ಮೀನಿನ ಹೆಸರು ಚಿಮೇರಾ ಮಾನ್​ಸ್ಟ್ರೋಸಾ ಲಿನಿಯಾಸ್. ಗ್ರೀಕ್​ ಇತಿಹಾಸದ ಆಧಾರವಾಗಿ ಈ ಮೀನಿಗೆ ಹೆಸರಿಡಲಾಗಿದೆಯಂತೆ. ಸಮುದ್ರದ ಆಳದಲ್ಲಿ ಈ ಮೀನುಗಳು ಜೀವಿಸುತ್ತವೆ. ಆಗಾಗ ಮೀನುಗಾರರ ಬಲೆಗೆ ಅಥವಾ ಗಾಳಕ್ಕೆ ಸಿಲುಕಿಕೊಳ್ಳುತ್ತವೆ ಎಂಬುದು ಸ್ಥಳೀಯರ ಮಾತಾಗಿದೆ. ಇನ್ನು ನೋಡಲು ವಿಚಿತ್ರವಾಗಿರುವ ಈ ಮೀನಿನ ಫೋಟೋ ಸಖತ್​ ವೈರಲ್​ ಆಗುತ್ತಿದೆ.

ABOUT THE AUTHOR

...view details