ಕರ್ನಾಟಕ

karnataka

ETV Bharat / international

ರಾಷ್ಟ್ರಪತಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತನಿಖೆಗೆ ಏರ್ ಇಂಡಿಯಾ ಆದೇಶ! - ರಾಮನಾಥ್ ಕೋವಿಂದ್

ರಾಷ್ಟ್ರಪತಿ ಕೋವಿಂದ್​ ಪ್ರಾಣಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ 3 ಗಂಟೆ ತಡವಾಗಿ ಪ್ರಯಾಣ ಬೆಳೆಸಿದ್ದು, ಘಟನೆ ಬಗ್ಗೆ ಏರ್​ ಇಂಡಿಯಾ ತನಿಖೆಗೆ ಆದೇಶಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್

By

Published : Sep 16, 2019, 5:03 PM IST

ಜೂರಿಚ್(ಸ್ವಿಟ್ಜರ್​ಲ್ಯಾಂಡ್): ಜೂರಿಚ್​ನಿಂದ ಸೊಲೆವೆನಿಯಾಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಯಾಣಿಸ ಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ 3 ಗಂಟೆ ತಡವಾಗಿ ಪ್ರಯಾಣ ಬೆಳೆಸಿದ್ದಾರೆ.

ಜೂರಿಚ್ ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಕೋವಿಂದ್ ಅವರು ಏರ್ ಇಂಡಿಯಾದ ಬೋಯಿಂಗ್-747 ವಿಮಾನದಲ್ಲಿ ಸ್ಲೋವೇನಿಯಾ ತೆರಳಬೇಕಿತ್ತು. ಆದ್ರೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ರಾಷ್ಟ್ರಪತಿಗಳನ್ನ ವಿಮಾನ ನಿಲ್ದಾಣದಿಂದ ಹೋಟೆಲ್​ಗೆ ವಾಪಸ್​ ಕಳಿಸಲಾಗಿದೆ.

ಕೂಡಲೆ ಕಾರ್ಯಪ್ರವೃತ್ತರಾದ ಏರ್​ ಇಂಡಿಯಾ ಎಂಜಿನಿಯರ್​ಗಳು​ ತಾಂತ್ರಿಕ ದೋಷ ಸರಿಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ತಡವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಸ್ಲೋವೇನಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ವಿಷಯವನ್ನ ಗಂಭೀರವಾಗಿ ಪರಿಗಣಿಸಿರುವ ಏರ್​ ಇಂಡಿಯಾ ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿದೆ.

ABOUT THE AUTHOR

...view details