ರೋಮ್: ಫ್ರಾನ್ಸ್‌ನ ನೀಸ್ನಲ್ಲಿ 2016 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ 28 ವರ್ಷದ ವ್ಯಕ್ತಿಯನ್ನು ಇಟಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
2016 ರ ಫ್ರಾನ್ಸ್ ಭಯೋತ್ಪಾದಕ ದಾಳಿ: ಇಟಲಿಯಲ್ಲಿ ಶಂಕಿತ ದಾಳಿಕೋರ ಬಂಧನ - Italian police have said they arrested a 28-year-old Albanian man suspected to be an accomplice in the 2016 terror attack
ಜುಲೈ 2016, 14 ರ ಗುರುವಾರ ಸಂಜೆ, ಫ್ರ್ಯಾಂಕೋ - ಟುನೇಷಿಯದ ಮೊಹಮದ್ ಲಹೌಆಯೇಜ್ ಬಾಹ್ಲೇಲ್, ಉದ್ದೇಶಪೂರ್ವಕವಾಗಿ ಒಂದು ಸರಕು ಟ್ರಕ್ನ್ನು ಫ್ರಾನ್ಸ್ ವಾಯುವಿಹಾರ ಮಾರ್ಗವಾದ ಡೆಸ್ ಆಂಗ್ಲಯೀಸ್ ನ ಜನಸಂದಣಿಯ ಒಳಗೆ ಓಡಿಸಿದ್ದ.
ಜುಲೈ 2016, 14 ರ ಗುರುವಾರ ಸಂಜೆ, ಫ್ರ್ಯಾಂಕೋ - ಟುನೇಷಿಯದ ಮೊಹಮದ್ ಲಹೌಆಯೇಜ್ ಬಾಹ್ಲೇಲ್, ಉದ್ದೇಶಪೂರ್ವಕವಾಗಿ ಒಂದು ಸರಕು ಟ್ರಕ್ನ್ನು ಫ್ರಾನ್ಸ್ ವಾಯುವಿಹಾರ ಮಾರ್ಗವಾದ ಡೆಸ್ ಆಂಗ್ಲಯೀಸ್ನಲ್ಲಿ ಬ್ಯಾಸ್ಟಿಲ್ ಡೇ ಆಚರಿಸುತ್ತಿರುವ ಜನಸಂದಣಿಯ ಮೇಲೆ ಹರಿಸಿದ್ದ. ಈ ವೇಳೆ ಬರೋಬ್ಬರಿ 86 ಜನರು ಸಾವಿಗೀಡಾಗಿದ್ದರು. ಆ ಕ್ಷಣದಲ್ಲೇ ಲಾಹೌಯೆಜ್ ಬೌಹ್ಲೆಲ್ನನ್ನು ಇಬ್ಬರು ಪೊಲೀಸ್ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದರು. ಈ ಸಂಬಂಧ ಈಗ ಬಂಧನವಾಗಿರುವ 28 ವರ್ಷದ ಅಲ್ಬೇನಿಯನ್ ವ್ಯಕ್ತಿ ದಾಳಿಕೋರನಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದಾನೆ ಎಂದು ಇಟಾಲಿಯನ್ ಮಾಧ್ಯಮಗಳು ವರದಿ ಮಾಡಿವೆ.
ನೀಸ್ ದಾಳಿಯನ್ನು ತಾವೇ ನಡೆಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ ಹೇಳಿಕೊಂಡಿತ್ತು. ಆದರೆ, ತನಿಖಾಧಿಕಾರಿಗಳು ಇದರ ಬಗ್ಗೆ ಶಂಸಯ ವ್ಯಕ್ತಪಡಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಆ ವೇಳೆ ಸಿಕ್ಕ ಮಾಹಿತಿ ಎಂದರೆ, ಆತ ಭಯೋತ್ಪಾದಕ ಗುಂಪಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ ಎಂಬ ಅಂಶ ಈಗ ಬಯಲಾಗಿದೆ.