ಕರ್ನಾಟಕ

karnataka

ETV Bharat / international

ಪ್ರವಾಹಕ್ಕೆ ಬೆಚ್ಚಿದ ಆಸ್ಟ್ರೇಲಿಯಾ: 18,000 ಜನರ ಸ್ಥಳಾಂತರ - Australia flood

ಭೀಕರ ಪ್ರವಾಹ ಎದುರಿಸುತ್ತಿರುವ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ ರಾಜ್ಯದಲ್ಲಿ ನೈಸರ್ಗಿಕ 'ವಿಪತ್ತು ಘೋಷಣೆ' ಮಾಡಲಾಗಿದೆ. ಭೀಕರ ಪ್ರವಾಹಕ್ಕೆ ಸಿಲುಕಿ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಈವರೆಗೆ 18 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ.

About 18,000 people evacuated in Australia after floods
ಪ್ರವಾಹಕ್ಕೆ ಬೆಚ್ಚಿದ ಆಸ್ಟ್ರೇಲಿಯಾ

By

Published : Mar 22, 2021, 2:52 PM IST

ಸಿಡ್ನಿ (ಆಸ್ಟ್ರೇಲಿಯಾ): ಕಳೆದ ವರ್ಷ ಕಾಳ್ಗಿಚ್ಚಿಗೆ ತತ್ತರಿಸಿದ್ದ ಆಸ್ಟ್ರೇಲಿಯಾ ಈ ಬಾರಿ ಪ್ರವಾಹಕ್ಕೆ ಬೆಚ್ಚಿಬಿದ್ದಿದೆ. ನ್ಯೂ ಸೌತ್ ವೇಲ್ಸ್‌ ರಾಜ್ಯದಲ್ಲಿ ಈವರೆಗೆ ಸುಮಾರು 18,000 ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ.

ನ್ಯೂ ಸೌತ್ ವೇಲ್ಸ್​​ನಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ರಾಜ್ಯದಲ್ಲಿ 'ನೈಸರ್ಗಿಕ ವಿಪತ್ತು' ಘೋಷಿಸಲಾಗಿದೆ. ನೂರಾರು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 200ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ರಸ್ತೆಗಳು, ಸೇತುವೆಗಳು ಮುಳುಗಡೆಯಾಗಿವೆ.

ಇದನ್ನೂ ಓದಿ: ಕಾಬೂಲ್‌ನಲ್ಲಿ ಬಾಂಬ್​ ಸ್ಫೋಟ: 24 ಗಂಟೆಗಳಲ್ಲಿ 7 ಮಂದಿ ಸಾವು

ಸುಮಾರು 60 ವರ್ಷಗಳ ಅಂದರೆ 1961ರ ಬಳಿಕ ನ್ಯೂ ಸೌತ್ ವೇಲ್ಸ್‌ ರಾಜ್ಯವು ಕಂಡ ಅತಿ ದೊಡ್ಡ ಭೀಕರ ಪ್ರವಾಹ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details