ಬಖ್ಮಾಚ್( ಉಕ್ರೇನ್):ರಷ್ಯಾ ಉಕ್ರೇನ್ನ ಪ್ರಮುಖ ನಗರಗಳ ಮೇಲೆ ತನ್ನ ದಾಳಿ ಮುಂದುವರೆಸಿದೆ. ಈ ನಡುವೆ ಉತ್ತರ ಉಕ್ರೇನ್ನ ಬಖ್ಮಾಚ್ ಮೇಲೂ ರಷ್ಯಾ ಸೈನಿಕರು ದಾಳಿ ನಡೆಸಿದ್ದಾರೆ. ಇಲ್ಲಿನ ಬೀದಿಗಳಲ್ಲಿ ಎಂಟ್ರಿಕೊಟ್ಟಿರುವ ರಷ್ಯನ್ ಟ್ಯಾಂಕರ್ವೊಂದನ್ನು ಉಕ್ರೇನಿಯನ್ ವ್ಯಕ್ತಿಯೊಬ್ಬ ತನ್ನ ಕೈಗಳಿಂದ ಏಕಾಂಗಿಯಾಗಿ ನಿಲ್ಲಿಸುತ್ತಿರುವ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಂಚಿಕೊಂಡಿದೆ.
ಉಕ್ರೇನ್ನ ಅಧಿಕೃತ Instagram ಅಕೌಂಟ್ನಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ರಷ್ಯಾದ ಬೃಹತ್ ಟ್ಯಾಂಕ್ವೊಂದನ್ನು ನಾಗರಿಕನನ್ನು ಬೀದಿಯಲ್ಲಿ ವೇಗವಾಗಿ ಹಿಂದಕ್ಕೆ ತಳ್ಳುತ್ತಿರುವುದನ್ನು ಚಿತ್ರಿಸಲಾಗಿದೆ. ಚಲಿಸುವ ಟ್ಯಾಂಕರ್ವೊಂದರ ಮುಂಭಾಗಕ್ಕೆ ತನ್ನ ಬರಿ ಕೈಗಳನ್ನು ಇರಿಸಿ, ತನ್ನ ಸಂಪೂರ್ಣ ಶಕ್ತಿ ಹಾಕಿ ಟ್ಯಾಂಕ್ ಅನ್ನು ಹಿಂದಕ್ಕೆ ತಳ್ಳುತ್ತಿರುವ ದೃಶ್ಯ ಸಖತ್ ಸದ್ದು ಮಾಡುತ್ತಿದೆ.