ಮರಿಯುಪೋಲ್(ಉಕ್ರೇನ್):ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರೆಸಿದೆ. ಮರಿಯುಪೋಲ್ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದ್ದು, ಕಟ್ಟಡದ ಅವಶೇಷಗಳಡಿ ಮಕ್ಕಳು ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಳೆದ 15 ದಿನಗಳಿಂದ ರಷ್ಯಾ ಮಿಲಿಟರಿ ಪಡೆ ಉಕ್ರೇನ್ನ ವಿವಿಧ ನಗರಗಳ ಮೇಲೆ ಶೆಲ್, ಬಾಂಬ್ ದಾಳಿ ನಡೆಸುತ್ತಿದ್ದು, ಪರಿಣಾಮ ನಿನ್ನೆ ಪೂರ್ವ ಉಕ್ರೇನ್ನ ಸೆವೆರೊಡೊನೆಸ್ಟ್ಕ್ನಲ್ಲಿ ರಷ್ಯಾ ದಾಳಿ ನಡೆಸಿದ್ದು, 10 ನಾಗರಿಕರು ಬಲಿಯಾಗಿದ್ದು, 17ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಷ್ಯಾ ಸೇನೆ ಉಕ್ರೇನ್ನಲ್ಲಿ ಯುದ್ಧ ಮುಂದುವರೆಸಿರುವ ಪರಿಣಾಮ ಝೈಟೊಮಿರ್, ಖಾರ್ಕಿವ್ನ ವಸತಿ ಪ್ರದೇಶಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ನಿನ್ನೆ ನಡೆದ ವಾಯುದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಅನೇಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.