ಕರ್ನಾಟಕ

karnataka

ETV Bharat / international

ರಷ್ಯಾ ದಾಳಿ ಮಧ್ಯೆ ಬಾಂಬ್​ ಶೆಲ್ಟರ್​​ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್​ ಮಹಿಳೆ! - ಉಕ್ರೇನ್ ಮೇಲೆ ರಷ್ಯಾ ದಾಳಿ

ರಷ್ಯಾ ಮಿಲಿಟರಿ ಪಡೆ ದಾಳಿ ಎದುರಿಸಲು ಉಕ್ರೇನ್​​ನ ಸಾವಿರಾರು ಸ್ವಯಂ ಸೇವಕರು ಕೈಯಲ್ಲಿ ಗನ್​ ಹಿಡಿದು ನಿಂತಿದ್ದು, ಇದೀಗ ಅಲ್ಲಿನ ಸಂಸದೆ ಕಿರಾ ರೂಡಿಕ್ ಕೂಡ ದೇಶ ರಕ್ಷಣೆಗೆ ಮುಂದಾಗಿದ್ದಾರೆ. ದೇಶದ ರಕ್ಷಣೆ ಮಾಡಲು ನಾನು ಸಹ ಸನ್ನದ್ಧಳಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ..

Russian war on Ukraine
Russian war on Ukraine

By

Published : Feb 26, 2022, 6:07 PM IST

Updated : Feb 26, 2022, 7:57 PM IST

ಕೀವ್​(ಉಕ್ರೇನ್​):ಕಳೆದ ಮೂರು ದಿನಗಳಿಂದ ಉಕ್ರೇನ್​​ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ಪಡೆ ಭೀಕರ ದಾಳಿ ನಡೆಸುತ್ತಿದೆ. ತಮ್ಮ ಪ್ರಾಣ ರಕ್ಷಣೆಗೋಸ್ಕರ ಸಾವಿರಾರು ಉಕ್ರೇನಿಯನ್​​​ ನಾಗರಿಕರು ಸಣ್ಣ-ಪುಟ್ಟ ಸ್ಥಳಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ರಷ್ಯಾದ ಬಾಂಬ್ ದಾಳಿಯ ನಡುವೆ ಕೂಡ ಉಕ್ರೇನ್​ನ ಮಹಿಳೆಯೋರ್ವಳು ಕೀವ್​​​ನ ಬಾಂಬ್​ ಶೆಲ್ಟರ್​​​ ತಾಣದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉಕ್ರೇನ್​ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿರಿ:ರಷ್ಯಾ - ಉಕ್ರೇನ್​ ಸಂಘರ್ಷ: ಉಕ್ರೇನ್​​ನಲ್ಲಿ 198 ನಾಗರಿಕರು ಸಾವು, ಸಾವಿರಕ್ಕೂ ಅಧಿಕ ಜನರಿಗೆ ಗಾಯ

ರಷ್ಯಾ ಭೀಕರ ದಾಳಿ ಮಧ್ಯೆ ಕೂಡ ಆಶ್ರಯ ತಾಣದಲ್ಲಿದ್ದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆಂದು ಅದು ಟ್ವೀಟ್ ಮಾಡಿದ್ದು, ಆ ಮಗುವಿಗೆ ನಾವು ಸ್ವಾತಂತ್ರ್ಯ(Freedom) ಎಂದು ಕರೆಯುತ್ತೇವೆ ಎಂದಿದೆ. ಮಗುವಿನ ಫೋಟೋ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಾಯಿ, ಮಗಳು ಆರೋಗ್ಯವಾಗಿದ್ದಾರೆಂಬ ಮಾಹಿತಿ ನೀಡಿದೆ.

ಕೈಯಲ್ಲಿ ಗನ್​ ಹಿಡಿದು ಯುದ್ಧಕ್ಕೆ ಸನ್ನದ್ದಳಾದ ಉಕ್ರೇನ್ ಸಂಸದೆ

ರಷ್ಯಾ ಮಿಲಿಟರಿ ಪಡೆ ದಾಳಿ ಎದುರಿಸಲು ಉಕ್ರೇನ್​​ನ ಸಾವಿರಾರು ಸ್ವಯಂ ಸೇವಕರು ಕೈಯಲ್ಲಿ ಗನ್​ ಹಿಡಿದು ನಿಂತಿದ್ದು, ಇದೀಗ ಅಲ್ಲಿನ ಸಂಸದೆ ಕಿರಾ ರೂಡಿಕ್ ಕೂಡ ದೇಶ ರಕ್ಷಣೆಗೆ ಮುಂದಾಗಿದ್ದಾರೆ. ದೇಶದ ರಕ್ಷಣೆ ಮಾಡಲು ನಾನು ಸಹ ಸನ್ನದ್ಧಳಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.

Last Updated : Feb 26, 2022, 7:57 PM IST

ABOUT THE AUTHOR

...view details