ಕರ್ನಾಟಕ

karnataka

ETV Bharat / international

ಲಂಡನ್‌: ಭಾರತೀಯ ಮೂಲದ ವ್ಯಕ್ತಿಗೆ ಮೊದಲ ಕೋವಿಡ್‌ ವ್ಯಾಕ್ಸಿನ್‌

ಕೋವಿಡ್​-19 ವ್ಯಾಕ್ಸಿನ್​ ಫೈಝರ್​ ಲಸಿಕೆಯನ್ನು ಸ್ವಯಂಪ್ರೇರಿತವಾಗಿ ಪಡೆದುಕೊಳ್ಳಲು ಇಂಗ್ಲೆಂಡ್‌ನ ಈಶಾನ್ಯ ಭಾಗದ ನಿವಾಸಿಯಾಗಿರುವ ಭಾರತೀಯ ಮೂಲದ ವ್ಯಕ್ತಿ ಮುಂದಾಗಿದ್ದಾರೆ. ಈ ಮೂಲಕ ಅವರು ಕೊರೊನಾ ವಿರುದ್ಧ ಲಸಿಕೆ ಪಡೆಯಲಿರುವ ವಿಶ್ವದ ಮೊದಲ ವ್ಯಕ್ತಿಯಾಗಲಿದ್ದಾರೆ.

ಕೊರೊನಾ ವ್ಯಾಕ್ಸಿನ್​ ಫೈಝರ್​
ಕೊರೊನಾ ವ್ಯಾಕ್ಸಿನ್​ ಫೈಝರ್​

By

Published : Dec 8, 2020, 9:34 AM IST

Updated : Dec 8, 2020, 9:41 AM IST

ಲಂಡನ್​: ಇಂಗ್ಲೆಂಡ್‌ನ ಈಶಾನ್ಯ ಭಾಗದ 87 ವರ್ಷದ ಭಾರತೀಯ ಮೂಲದ ವ್ಯಕ್ತಿ ಕೊರೊನಾ ಲಸಿಕಾ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇಂದು ನ್ಯೂಕ್ಯಾಸಲ್‌ನ ಆಸ್ಪತ್ರೆಯಲ್ಲಿ ಕೋವಿಡ್​-19 ವ್ಯಾಕ್ಸಿನ್​ ಫೈಝರ್​ಅನ್ನು ಸ್ವಯಂಪ್ರೇರಿತವಾಗಿ ಅವರು ಪಡೆದುಕೊಳ್ಳಲಿದ್ದಾರೆ.

ಟೈನ್ ಆ್ಯಂಡ್​ ವೇರ್‌ ಸಂಸ್ಥೆಯ ಹರಿಶುಕ್ಲಾ ಎಂಬವರು ಈ ಪ್ರಯೋಗದಲ್ಲಿ ಭಾಗಿಯಾಗುತ್ತಿದ್ದಾರೆ. 'ನಾವು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡುವ ಸಮೀಪಕ್ಕೆ ಬಂದಿದ್ದೇವೆ. ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ನನ್ನ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ನನಗೆ ಖುಷಿ ಇದೆ' ಎಂದು ಶುಕ್ಲಾ ಹೇಳಿದ್ದಾರೆ.

ಓದಿ: ಫೈಝರ್​​ಗೆ ಜೈ ಎಂದ ಬ್ರಿಟನ್​​: ಮುಂದಿನ ವಾರದಿಂದಲೇ ಕೋವಿಡ್ ಲಸಿಕೆ..ಭಾರತದಲ್ಲಿ ಯಾವಾಗ?

'ಇದೊಂದು ದೊಡ್ಡ ಹೆಜ್ಜೆ' ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್‌ ಬಣ್ಣಿಸಿದ್ದಾರೆ.

ಮಾರಣಾಂತಿಕ ವೈರಸ್​ ಕೊರೊನಾದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಕೋಟ್ಯಂತರ ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆ ತಯಾರು ಮಾಡಲು ಮುಂದಾಗಿವೆ. ಇದೀಗ ಇಂಗ್ಲೆಂಡ್​ನಲ್ಲಿ ಫೈಝರ್​ ಎಂಬ ಕೋವಿಡ್​-19 ಲಸಿಕೆ ತಯಾರಾಗಿದ್ದು, ಜನರಿಗೆ ಪೂರೈಸಲು ಸಿದ್ಧವಾಗಿದೆ.

Last Updated : Dec 8, 2020, 9:41 AM IST

ABOUT THE AUTHOR

...view details