ಹೈದರಾಬಾದ್:ಕೊರೊನಾ ಮಹಾಮಾರಿ ಮೂರನೇ ಅಲೆ ಕೆಲವೊಂದು ವಿಶ್ವದ ಕೆಲವು ದೇಶಗಳಲ್ಲಿ ಜೋರಾಗಿ ಬೀಸಲು ಶುರು ಮಾಡಿದ್ದು, ಜರ್ಮನಿಯಲ್ಲಿ ಒಂದೇ ದಿನ ದಾಖಲೆಯ 50 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ಗಳು (Covid19) ಪತ್ತೆಯಾಗಿವೆ. ಇದರ ಜೊತೆಗೆ 235 ಜನರು ಸಾವನ್ನಪ್ಪಿದ್ದಾರೆಂದು ಅಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕಳೆದ ಒಂದೇ ವಾರದಲ್ಲಿ ಜರ್ಮನಿಯ ವಿವಿಧ ಭಾಗಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ, ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.
ಈ ಬಗ್ಗೆ ಮಾತನಾಡಿರುವ ಬರ್ಲಿನ್ ಚಾರಿಟ್ ಆಸ್ಪತ್ರೆಯ ವೈರಾಲಜಿ ವಿಭಾಗದ ಮುಖ್ಯಸ್ಥ ಕ್ರಿಶ್ಚಿಯನ್ ಡ್ರೊಸ್ಟನ್, ಇದೀಗ ನಾವು ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಸ್ಥಳೀಯ ಆಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಕೋವಿಡ್ (Covid Vaccine) ಲಸಿಕೆ ಅಭಿಯಾನ ಪರಿಣಾಮಕಾರಿಯಾಗದಿರುವುದೇ ಸೋಂಕು ಉಲ್ಭಣಗೊಳ್ಳಲು ಕಾರಣ ಎಂದರು.