ಯುಕೆ: ಸಂಗಾತಿ ಜತೆ ಸಂಭೋಗದ ವೇಳೆ ವ್ಯಕ್ತಿಯ ಮರ್ಮಾಂಗ ಮುರಿದು ಹೋಗಿರುವ ಘಟನೆ ಯುಕೆಯಲ್ಲಿ ಬೆಳಕಿಗೆ ಬಂದಿದೆ. 40 ವರ್ಷದ ವ್ಯಕ್ತಿ ತನ್ನ ಸಂಗಾತಿ ಜತೆ ಸರಸದಲ್ಲಿ ನಿರತನಾಗಿದ್ದ ವೇಳೆ ಈ ದುರ್ಘಟನೆ ಘಟಿಸಿದೆ.
ಯುಕೆ ವೈದ್ಯರು ತಿಳಿಸಿರುವ ಪ್ರಕಾರ, ಪ್ರಪಂಚದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದಿದೆ. ಈ ಘಟನೆ ವೇಳೆ ವ್ಯಕ್ತಿ ಯಾವ ರೀತಿಯಾಗಿ ಸೆಕ್ಸ್ ನಡೆಸುತ್ತಿದ್ದನು ಎಂಬುದು ಗೊತ್ತಾಗಿಲ್ಲ. ಮುಖ್ಯವಾಗಿ 'doggy style' ಅಥವಾ 'man on top' ರೀತಿಯಲ್ಲಿ ದೈಹಿಕ ಸಂಪರ್ಕ ನಡೆಸಿದಾಗ ಇಂತಹ ಘಟನೆ ನಡೆಯುವ ಸಂಭವ ಇರುತ್ತವೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿರಿ: ಅತ್ಯಾಚಾರ ಸಂತ್ರಸ್ತೆಯ ಸಹೋದರನ ಮರ್ಮಾಂಗ ಕತ್ತರಿಸಿದ ದುಷ್ಕರ್ಮಿಗಳು
ಶಿಶ್ನದಲ್ಲಿ ಯಾವುದೇ ರೀತಿಯ ಮೂಳೆಗಳಿರುವುದಿಲ್ಲ. ಆದರೆ ಜನನಾಂಗ ಏಕಾಏಕಿಯಾಗಿ ಹೊರಬಂದು ಬಾಗಿದಾಗ ಇಂತಹ ಘಟನೆ ನಡೆಯುವ ಸಾಧ್ಯತೆ ಇರುತ್ತದೆ. ಶಿಶ್ನ ಮುರಿದಾಗ ಕ್ರಮೇಣವಾಗಿ ಅದು ಊದಿಕೊಳ್ಳುತ್ತದೆ. ಆದರೆ ಅದು ಮತ್ತೆ ಸುಧಾರಿಸಿಕೊಳ್ಳಲು ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎನ್ನಲಾಗಿದೆ. ಆದರೆ ಈ ವೇಳೆ ಅಗತ್ಯ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಲೈಂಗಿಕ ಕ್ರಿಯೆ ನಡೆಸುವಾಗ 1924ರಿಂದ ಪ್ರಪಂಚಾದ್ಯಂತ 1,600 ಶಿಶ್ನ ಮುರಿತ ಪ್ರಕರಣಗಳು ದಾಖಲಾಗಿವೆ. 40ರ ವಯಸ್ಸಿನ ಪುರುಷರಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ ಅನ್ನೋದು ವೈದ್ಯರು ನೀಡುವ ಅಂಕಿಅಂಶ. ಹೀಗೆ ವರದಿಯಾದ ಬಹುತೇಕ ಪ್ರಕರಣಗಳಲ್ಲಿ ಶಿಶ್ನ ಅಡ್ಡಲಾಗಿ ಮುರಿದಿರುವುದು ಕಂಡು ಬಂದಿದೆ. ಆದರೆ ಇದೇ ಮೊದಲ ಸಲ ಮರ್ಮಾಂಗ ಲಂಬವಾಗಿ ಮುರಿದು ಹೋಗಿದೆ ಎಂದು ತಿಳಿಸಿದ್ದಾರೆ.