ಮಾಸ್ಕೋ: ರಷ್ಯಾದ ಮೂವರು ಗಗನಯಾತ್ರಿಗಳನ್ನು ಹೊತ್ತುಕೊಂಡು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾದ ರಾಕೆಟ್ ಶುಕ್ರವಾರ ಯಶಸ್ವಿಯಾಗಿ ತೆರಳಿದೆ.
ರಷ್ಯಾದ ಬಾಹ್ಯಾಕಾಶ ನಿಗಮದ ಗಗನಯಾತ್ರಿಗಳಾದ ಒಲೆಗ್ ಆರ್ಟೆಮಿಯೆವ್, ಡೆನಿಸ್ ಮ್ಯಾಟ್ವೀವ್ ಮತ್ತು ಸೆರ್ಗೆಯ್ ಕೊರ್ಸಕೋವ್ ಅವರಿದ್ದ 'Soyuz MS-21' ರಾಕೆಟ್ ಅನ್ನು ರಷ್ಯಾ ಬಾಹ್ಯಾಕಾಶ ಸಂಸ್ಥೆಯಾದ ರೋಸ್ಕೊಸ್ಮೊಸ್ನಲ್ಲಿ ಶುಕ್ರವಾರ ರಾತ್ರಿ 8:55ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ರಾಕೆಟ್ ಬಾಹ್ಯಾಕಾಶ ನೌಕೆಯಲ್ಲಿ ನಿಯೋಜಿತ ಕಕ್ಷೆಯನ್ನು ಸುರಕ್ಷಿತವಾಗಿ ತಲುಪಿದೆ. ಫೆಬ್ರವರಿ 24 ರಂದು ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ನಂತರ ಮೊದಲನೇ ಬಾರಿಗೆ ರಾಕೆಟ್ ಉಡಾವಣೆ ಮಾಡಿದೆ.