ಕೀವ್(ಉಕ್ರೇನ್):ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಈಗಾಗಲೇ ಎಲ್ಲ ನಗರಗಳ ಮೇಲೆ ದಾಳಿ ನಡೆಸಿದೆ. ಇದರ ಹೊರತಾಗಿ ಕೂಡ ಪುಟ್ಟ ರಾಷ್ಟ್ರ ಉಕ್ರೇನ್ ತನ್ನ ರಕ್ಷಣೆಗಾಗಿ ಸೂಕ್ತ ತಿರುಗೇಟು ನೀಡ್ತಿದ್ದು, ಎದುರಾಳಿ ದೇಶದ ಸಾವಿರಾರು ಯೋಧರ ಹತ್ಯೆಗೈದಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದಂತೆ ಸಾವಿರಾರು ಜನರು ಸ್ವಯಂ ಪ್ರೇರಿತರಾಗಿ ಮಿಲಿಟರಿ ಸೇರಿಕೊಂಡು ದೇಶ ರಕ್ಷಣೆಯಲ್ಲಿ ಭಾಗಿಯಾಗಿದ್ದು, ಇದೀಗ 26 ವರ್ಷದ ಯುವತಿಯೋರ್ವಳು ಸಹ ಕೈಗೆ ಗನ್ ಹಿಡಿದಿದ್ದಾಳೆ. ಉಕ್ರೇನ್ನಲ್ಲಿ ಮಾರ್ಕೆಟಿಂಗ್ ಕೆಲಸ ಮಾಡ್ತಿದ್ದ ಅಲೆನಾ ಇದೀಗ ಕೈಯಲ್ಲಿ AK-47 ಗನ್ ಹಿಡಿದು ಕೀವ್ ರಕ್ಷಣೆಗೆ ಮುಂದಾಗಿದ್ದಾಳೆ.
ಇದನ್ನೂ ಓದಿರಿ:ಅಧಿಕ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಗೆ ತಕ್ಷಣ ಕ್ರಮ ಕೈಗೊಳ್ಳಿ: ಎಲಾನ್ ಮಸ್ಕ್
ಉಕ್ರೇನ್ನ ರಾಜಧಾನಿ ಕೀವ್ ಹೊರಗಿನ ಚೆಕ್ ಪಾಯಿಂಟ್ನಲ್ಲಿ ಶಸ್ತ್ರಸಜ್ಜಿತವಾಗಿ ಗನ್ ಹಿಡಿದು ನಿಂತಿದ್ದು, ನನ್ನ ಪ್ರದೇಶದ ರಕ್ಷಣೆಯಲ್ಲಿ ಭಾಗಿಯಾಗಿದ್ದೇನೆಂದು ಹೇಳಿಕೊಂಡಿದ್ದಾರೆ. ಕೀವ್ ಪ್ರಾದೇಶಿಕ ರಕ್ಷಣಾ ಘಟಕದೊಂದಿಗೆ ಯುದ್ಧದಲ್ಲಿ ಭಾಗಿಯಾಗಿರುವ ಅಲೆನಾ, ಇಲ್ಲಿನ ಸೈನಿಕರೊಂದಿಗೆ ಹೋರಾಡಲು ನಾನು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಉಕ್ರೇನ್ಗೆ ಈಗಾಗಲೇ ಅಮೆರಿಕ, ಯುರೋಪಿಯನ್ ಒಕ್ಕೂಟ, ಜಪಾನ್ ಹಾಗೂ ಫ್ರಾನ್ಸ್ಗಳು ಮಿಲಿಟರಿ ಸಹಾಯ ಮಾಡ್ತಿದ್ದು, ಭಾರತ ಮಾತ್ರ ತಟಸ್ಥ ನೀತಿ ಹೊರತಾಗಿ ಕೂಡ ಮಾನವೀಯತೆ ದೃಷ್ಟಿಯಿಂದ ಔಷಧಿ ಹಾಗೂ ಅಗತ್ಯವಸ್ತು ಪೂರೈಕೆ ಮಾಡ್ತಿದೆ.
ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ವಿರುದ್ಧ ಹೋರಾಟ ನಡೆಸಲು ವಿದೇಶದಲ್ಲಿ ವಾಸವಾಗಿದ್ದ ಉಕ್ರೇನ್ನ 66,224 ಯುವಕರು ವಿದೇಶದಿಂದ ವಾಪಸ್ ಆಗಿದ್ದಾರೆಂದು ಅಲ್ಲಿನ ರಕ್ಷಣಾ ಸಚಿವರು ಮಾಹಿತಿ ಸಹ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ.