ಬ್ರಿಟನ್:ಯುದ್ಧಪೀಡಿತ ಉಕ್ರೇನ್ಗೆ ಬಹುತೇಕ ಎಲ್ಲ ದೇಶಗಳು ಮಾನವೀಯ ದೃಷ್ಟಿಯಿಂದ ನೆರವು ಮಾಡಲು ಮುಂದಾಗಿದ್ದು, ಇದೀಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 175 ಮಿಲಿಯನ್ ಪೌಂಡ್ ಮಾನವೀಯ ನೆರವು ಘೋಷಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ರಷ್ಯಾ ಅಧ್ಯಕ್ಷರು ಅತಿದೊಡ್ಡ ತಪ್ಪು ಮಾಡಿದ್ದು, ಅದಕ್ಕೆ ಸೂಕ್ತ ಬೆಲೆ ತೆರಲಿದ್ದಾರೆ ಎಂದಿದ್ದಾರೆ. ಕೆನಡಾ ಪ್ರಧಾನಿ ಕೂಡ ಇದೇ ವೇಳೆ ಮಾತನಾಡಿದ್ದು, ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವ ಅವಶ್ಯಕತೆ ಇದೆ ಎಂದಿದ್ದು, ಸುಮಾರು ಒಂದು ಶತಕೋಟಿ ಡಾಲರ್ ಮೌಲ್ಯದ ಆರ್ಥಿಕ ಸಹಾಯ ನೀಡಲು ಸಿದ್ಧ ಎಂದಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಗೆ ನಮ್ಮ ಹೋರಾಟ ಮುಂದುವರೆಯಲಿದ್ದು, ಉಕ್ರೇನ್ ಮೇಲೆ ದಾಳಿ ಮಾಡಿರುವ ಪುಟಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.