ಕರ್ನಾಟಕ

karnataka

ETV Bharat / international

ಮೀನುಗಾರಿಕೆಗೆ ತೆರಳಿದ್ದ ಬೋಟ್​​​ ಮುಳುಗಡೆ: 17 ಜನರು ನಾಪತ್ತೆ - ರಷ್ಯಾದ ಮೀನುಗಾರಿಕಾ ದೋಣಿ ದುರಂತ

ಮೀನುಗಾರಿಕೆಗೆಂದು ದೋಣಿಯೊಂದು ತೆರಳಿದ್ದ ರಷ್ಯಾದ ಹಡಗೊಂದು ಮುಳುಗಿದೆ. ಪರಿಣಾಮ ಅದರಲ್ಲಿದ್ದ ಇಬ್ಬರನ್ನು ಹೊರತುಪಡಿಸಿ ಬರೋಬ್ಬರಿ 17 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

17 missing after Russian fishing boat sinks in Arctic
ಸಂಗ್ರಹ ಚಿತ್ರ

By

Published : Dec 28, 2020, 4:39 PM IST

ಮಾಸ್ಕೋ:ರಷ್ಯಾದ ಮೀನುಗಾರಿಕಾ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಪರಿಣಾಮ 17 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ.

ಬ್ಯಾರೆಂಟ್ಸ್ ಸಮುದ್ರದಲ್ಲಿ ದೋಣಿ ಮುಳುಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

19 ಜನರಿದ್ದ ಒನೆಗಾ ಎಂಬ ದೋಣಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಭಾರಿ ಪ್ರಮಾಣದ ಮಂಜುಗಡ್ಡೆ ಪರಿಣಾಮ ಸಮುದ್ರದಲ್ಲಿ ಹಡಗು ಮುಳುಗಿದೆ ಎಂದು ರಷ್ಯಾದ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿ ಮುಳುಗಡೆ: ಕರಾವಳಿ ಕಾವಲು ಪಡೆಯಿಂದ ರಕ್ಷಣೆ

ಹವಾಮಾನ ವೈಪರೀತ್ಯದ ನಡುವೆ ನಾಪತ್ತೆಯಾದ ಮೀನುಗಾರರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details