ಕರ್ನಾಟಕ

karnataka

ETV Bharat / international

ಉಕ್ರೇನ್​​ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ 130 ಬಸ್ ಸೇವೆ ಕಲ್ಪಿಸಿದ ರಷ್ಯಾ

ಉಕ್ರೇನ್​​ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಮಾಡಲು ರಷ್ಯಾ ಮಿಲಿಟರಿ ಮುಂದಾಗಿದ್ದು, ಇದೀಗ 130 ಬಸ್​​​ ಸಿದ್ಧಗೊಳಿಸಿದೆ.

Russian Army
Russian Army

By

Published : Mar 4, 2022, 3:09 PM IST

ಮಾಸ್ಕೋ(ರಷ್ಯಾ): ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ಮಿಲಿಟರಿ ಈಗಾಗಲೇ ಬಹುತೇಕ ಎಲ್ಲ ನಗರಗಳ ಮೇಲೆ ದಾಳಿ ನಡೆಸಿದೆ. ಇದರ ಮಧ್ಯೆ ಉಕ್ರೇನ್​​ನ ವಿವಿಧ ನಗರಗಳಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ರಷ್ಯಾ ಮಿಲಿಟರಿ ಮುಂದಾಗಿದ್ದು, ಅದಕ್ಕಾಗಿ 130 ಬಸ್​​​ ಸಿದ್ಧಪಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ರಷ್ಯಾದ ಸೇನಾ ಮುಖ್ಯಸ್ಥ ಕರ್ನಲ್​ ಜನರಲ್ ಮಿಖಾಯಿಲ್​ ಮಿಜಿಂಟ್ಸೆವ್​​ ಮಾತನಾಡಿದ್ದು, ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಮಾಡಲು 130 ಬಸ್​​ ಸಿದ್ಧಗೊಂಡಿದ್ದು, ಬೆಲ್ಗೊರೊಡ್​​ ಪ್ರದೇಶದ ನೆಖೋಟೆಯೆವ್ಕಾ ಮತ್ತು ಸುಡ್ಜಾ ಚೆಕ್​​ಪೋಸ್ಟ್​​ಗಳಿಂದ ತೆರಳಲಿವೆ ಎಂದು ತಿಳಿಸಿದ್ದಾರೆ.

ಉಕ್ರೇನ್​​​​ನಾದ್ಯಂತ ರಷ್ಯಾ ತನ್ನ ಮಿಲಿಟರಿ ದಾಳಿ ತೀವ್ರಗೊಳಿಸಿರುವ ಕಾರಣ ಭಾರತದ ಅನೇಕ ವಿದ್ಯಾರ್ಥಿಗಳು ಸುಮಿ, ಖಾರ್ಕಿವ್​​ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅಲ್ಲಿನ ರಷ್ಯಾ ಮಿಲಿಟರಿ ಈ ನಿರ್ಧಾರ ಕೈಗೊಂಡಿದೆ. ರಷ್ಯಾ ಮಿಲಿಟರಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸುಮಾರು 700 ವಿದ್ಯಾರ್ಥಿಗಳು ಉಕ್ರೇನ್​​ನ ಈಶಾನ್ಯ ಭಾಗ ಸಮಿಯಲ್ಲಿ ಸಿಲುಕಿಕೊಂಡಿದ್ದು, ತೊಂದರೆಗೊಳಗಾಗಿದ್ದಾರೆ. ಇದೀಗ ಅವರ ರಕ್ಷಣೆಗೆ ರಷ್ಯಾ ಕೂಡ ಕೈಜೋಡಿಸಿದೆ.

ಇದನ್ನೂ ಓದಿ:ಉಕ್ರೇನ್ ಯುದ್ಧ - ಅಮೆರಿಕ - ಭಾರತ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ಸಲ್ಲ: ಸೆನೆಟರ್​ ಎಚ್ಚರಿಕೆ

ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ರಕ್ಷಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಇದರ ಬೆನ್ನಲ್ಲೇ ರಷ್ಯಾ ಈ ನಿರ್ಧಾರ ಕೈಗೊಂಡಿದೆ.

ABOUT THE AUTHOR

...view details