ಟೋಕಿಯೊ:ಜಪಾನ್‌ನ ಸಮುದ್ರ ತೀರದಲ್ಲಿ ದಾಖಲೆಯ ಹಿಮಪಾತವಾಗಿದ್ದು, ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ಅಲ್ಲದೇ ಸುಮಾರು 250 ಜನರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಏಜೆನ್ಸಿಯ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.
ಫುಕುಯಿ ಪ್ರಾಂತ್ಯದಲ್ಲಿ 60ರಿಂದ 80 ವರ್ಷದ ಮೂವರು ಸಾವಿಗೀಡಾಗಿದ್ದು, ಹಿಮಪಾತಕ್ಕೆ ಸಂಬಂಧಿಸಿದ ಅಪಘಾತಗಳಲ್ಲಿ 47 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಿಮವನ್ನು ತೆಗೆದುಹಾಕಲು ಪ್ರಯತ್ನಿಸಿದ ಪರಿಣಾಮ ನಿಗಾಟಾ ಪ್ರಾಂತ್ಯದಲ್ಲಿ ನಾಲ್ಕು ಸಾವುಗಳು ಸಂಭವಿಸಿವೆ ಎಂದು ಸಂಸ್ಥೆ ತಿಳಿಸಿದೆ.
ಜಪಾನ್‌ನಲ್ಲಿ ಉಂಟಾದ ಹಿಮಪಾತಕ್ಕೆ ಫುಕುಯಿಯ ಹೊಕುರಿಕು ಎಕ್ಸ್‌ಪ್ರೆಸ್ ವೇಯಲ್ಲಿ ಸುಮಾರು 1,200ಕ್ಕೂ ಹೆಚ್ಚು ವಾಹನಗಳು ಸಿಕ್ಕಿಕೊಂಡಿದ್ದವು.