ಕರ್ನಾಟಕ

karnataka

ETV Bharat / international

ಯೋಗ ಭಾರತಕ್ಕೆ ಸೇರಿದ್ದಲ್ಲ, ನೇಪಾಳದಲ್ಲಿ ಹುಟ್ಟಿದ್ದು - ಪ್ರಧಾನಿ ಕೆಪಿ ಶರ್ಮಾ ಒಲಿ ವಿವಾದಾತ್ಮಕ ಹೇಳಿಕೆ - ವಿಶ್ವ ಯೋಗ ದಿನಾಚರಣೆ

ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿತ್ತೇ ಹೊರತು ಭಾರತದಲ್ಲಿ ಅಲ್ಲ ಎಂದು ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Yoga originated in Nepal, not India: PM Oli
ಯೋಗ ಭಾರತಕ್ಕೆ ಸೇರಿದ್ದಲ್ಲ, ನೇಪಾಳದಲ್ಲಿ ಹುಟ್ಟಿದ್ದು - ಪ್ರಧಾನಿ ಕೆಪಿ ಶರ್ಮಾ ಒಲಿ ವಿವಾದಾತ್ಮಕ ಹೇಳಿಕೆ

By

Published : Jun 22, 2021, 4:19 AM IST

ನವದೆಹಲಿ:ಭಾರತದೊಂದಿಗೆ ಗಡಿ ವಿಚಾರ ಹಾಗೂ ರಾಮ ನೇಪಾಳಕ್ಕೆ ಸೇರಿದ್ದ ದೇವರು ಎಂದು ವಿವಾದಾತ್ಮಕ ಹೇಳಿಕೆಗೆಗಳನ್ನು ನೀಡುತ್ತಿರುವ ಅಲ್ಲಿ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ, ಇದೀಗ ಯೋಗ ನಮ್ಮದು ಎಂದಿದ್ದಾರೆ. ನಿನ್ನೆ ವಿಶ್ವದಾದ್ಯಂತ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಬಾಲುವತಾರ್‌ನಲ್ಲಿರುವ ತಮ್ಮನಿವಾಸದಲ್ಲಿ ಮಾತನಾಡಿರುವ ಅವರು, ಯೋಗ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಹೊರತು ಭಾರತದಲ್ಲಲ್ಲ ಎಂದಿದ್ದಾರೆ.

ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಭಾರತದ ಸ್ವರೂಪ ಈಗಿನಂತಿರಲಿಲ್ಲ ಬದಲಾಗಿ ವಿವಿಧ ವಿಭಾಗಗಳಲ್ಲಿ ವಿಂಗಡನೆಯಾಗಿತ್ತು ಎಂದಿದ್ದಾರೆ. ಭಾರತೀಯ ತಜ್ಞರು ಇದರ ಬಗ್ಗೆ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈಗ ಇರುವ ಭಾರತವು ಹಿಂದೆ ಇರಲಿಲ್ಲ. ಆ ಸಮಯದಲ್ಲಿ ಭಾರತವನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಮತ್ತು ಆಗ ಭಾರತ ಉಪಖಂಡ ಅಥವಾ ಒಂದು ಖಂಡವಾಗಿತ್ತು ಎಂದರು.

ABOUT THE AUTHOR

...view details