ಕೊಲಂಬೊ : ‘ಎಕ್ಸ್-ಪ್ರೆಸ್ ಪರ್ಲ್’ ಹಡಗಿನಲ್ಲಿನ ಬೆಂಕಿ ನಂದಿಸುವಲ್ಲಿ ಭಾರತ ಮತ್ತು ಶ್ರೀಲಂಕಾಗಳ ಅವಿರತ ಜಂಟಿ ಪ್ರಯತ್ನ ಯಶಸ್ವಿಯಾಗಿದೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಿರಂತರ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ ಎಂದು ಕೊಲಂಬೊದ ಭಾರತದ ಹೈ ಕಮಿಷನ್ ಟ್ವೀಟ್ ಮಾಡಿದೆ.
ಶ್ರೀಲಂಕಾದ ಕಡಲ ತೀರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿದ್ದ ಸಿಂಗಾಪುರದ ಸರಕು ಸಾಗಣೆ ಹಡಗು ಮುಳುಗುತ್ತಿದೆ ಎಂಬ ಭೀತಿ ಉಂಟಾಗಿತ್ತು. ಮೇ 20 ರಂದು ಹಡಗು ಕೊಲಂಬೊ ಬಂದರಿಗೆ ಸಮೀಪಿಸುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಅದರಲ್ಲಿ ಚೀನಾ, ಫಿಲಿಪೈನ್ಸ್, ಭಾರತ, ರಷ್ಯಾದ ಸಿಬ್ಬಂದಿ ಇದ್ದರು.
ಶ್ರೀಲಂಕಾ ನೌಕಾಪಡೆ 25 ಸಿಬ್ಬಂದಿಯನ್ನು ರಕ್ಷಿಸಿದ್ದು, ಅದರಲ್ಲಿದ್ದ ಇಬ್ಬರು ಭಾರತೀಯ ಪ್ರಜೆಗಳಿಗೆ ಗಾಯಗಳಾಗಿವೆ. ಅವರಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:1000 ಅಲೋಪತಿ ಡಾಕ್ಟರ್ಗಳನ್ನ ಆಯುರ್ವೇದ ವೈದ್ಯರನ್ನಾಗಿ ಮಾಡುತ್ತೇವೆ: ಬಾಬಾ ರಾಮದೇವ್
ಸಾಗರ ಪರಿಸರ ಸಂರಕ್ಷಣಾ ಪ್ರಾಧಿಕಾರ (ಎಂಇಪಿಎ)ವು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಹಡಗಿನ ಕ್ಯಾಪ್ಟನ್ ಮತ್ತು ಅದರ ಮೂಲ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸರ್ಕಾರಕ್ಕೆ ಒತ್ತಾಯಿಸಿದೆ.