ಬೀಜಿಂಗ್:ಕೊರೊನಾ ವೈರಸ್ಗೆ ಚೀನಾದಲ್ಲಿ ದಿನೇದಿನೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆಘಾತಕಾರಿ ಎಂಬಂತೆ ವುಹಾನ್‌ನಲ್ಲಿ ಆಸ್ಪತ್ರೆಯ ನಿರ್ದೇಶಕರೊಬ್ಬರೂ ಸಾವನ್ನಪ್ಪಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ವುಹಾನ್‌ನಲ್ಲಿ ಹುಟ್ಟಿಕೊಂಡ COVID-19 ವೈರಸ್, 72,000ಕ್ಕೂ ಹೆಚ್ಚು ಜನರಿಗೆ ಹರಡಿದೆ. ಈವರೆಗೆ ಚೀನಾದಲ್ಲಿ 1,900ಕ್ಕೂ ಹೆಚ್ಚು ಜನ ಈ ವೈರಸ್ನಿಂದಾಗಿ ಸತ್ತಿದ್ದಾರೆ.
ವುಹಾನ್‌ನ ವುಚಾಂಗ್ ಆಸ್ಪತ್ರೆಯ ನಿರ್ದೇಶಕ ಲಿಯು ಝಿಮಿಂಗ್, ಇಂದು ಮುಂಜಾನೆ ಎಲ್ಲ ರೀತಿಯ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ನಡುವೆಯೂ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್‌ನಿಂದ ಮೃತಪಟ್ಟ ಆಸ್ಪತ್ರೆಯೊಂದರ ಮೊದಲ ನಿರ್ದೇಶಕ ಇವರು.
ಸದ್ಯ ಲಭ್ಯವಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕನಿಷ್ಠ ಆರು ಇತರ ವೈದ್ಯಕೀಯ ಸಿಬ್ಬಂದಿ ಈ ವೈರಸ್‌ನಿಂದ ಸಾವನ್ನಪ್ಪಿದ್ದರೆ, 1,716 ಮಂದಿ ಸೋಂಕಿಗೆ ಒಳಗಾಗಿದ್ದಾರೆ.