ವುಹಾನ್ (ಚೀನಾ): ಎರಡು ಸಾವಿರ ವರ್ಷಗಳಿಂದ ವುಹಾನ್ ಜನರ ಜೀವನದ ಭಾಗವಾದ ಯಾಂಗ್ಟ್ಜಿ ನದಿಯಲ್ಲಿ ದೋಣಿ ಸೇವೆಗಳನ್ನು ಪುನರಾರಂಭಿಸುವ ಮೂಲಕ 11 ದಶಲಕ್ಷ ಜನರಿರುವ ಈ ನಗರದಲ್ಲಿ ವ್ಯಾಪಾರ ಮತ್ತು ದೈನಂದಿನ ಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಮುಖ ಹೆಜ್ಜೆಯನ್ನಿಡಲಾಗಿದೆ.
ದೇಶದ ವಿಶಾಲವಾದ ನದಿ ಜಾಲಗಳ ಮೇಲೆ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಮತ್ತು ವಿದೇಶಿ ವ್ಯಾಪಾರದಲ್ಲಿ ಕಡಿಮೆ ಆಸಕ್ತಿ ಹೊಂದಿರುವ ಚೀನಾದ ಪ್ರಮುಖ ಕೇಂದ್ರ ವುಹಾನ್. 1979ರಲ್ಲಿ ಮಾರುಕಟ್ಟೆ ಶೈಲಿಯ ಆರ್ಥಿಕ ಸುಧಾರಣೆಗಳನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಪ್ರಾರಂಭಿಸಿದ ನಂತರ ಚೀನಾದ ಶಾಂಘೈ, ಹಾಂಗ್ ಕಾಂಗ್ ಮತ್ತು ಇತರ ಕರಾವಳಿ ನಗರಗಳಲ್ಲಿ ವ್ಯಾಪರ ಅಭಿವೃದ್ಧಿಯಾಯಿತು. ಇದರಿಂದಾಗಿ ವುಹಾನ್ ನಗರಕ್ಕೆ ಗ್ರಹಣ ಬಡಿದಂತಾಯಿತು.
ಆದರೆ ಇಂದು ವುಹಾನ್ ನಗರ ಆರ್ಥಿಕ ಅಭಿವೃದ್ಧಿಯ ಡೈನಮೋ ಆಗಿ ತನ್ನ ಸ್ಥಾನಮಾನವನ್ನು ಮರಳಿ ಪಡೆಯುತ್ತಿದೆ. ಏಕೆಂದರೆ ಚೀನಾದ ನಾಯಕರು ರಫ್ತುಗಳಿಂದ ದೇಶೀಯ ಗ್ರಾಹಕರ ಖರ್ಚಿನ ಆಧಾರದ ಮೇಲೆ ಹೆಚ್ಚು ಸುಸ್ಥಿರ ಬೆಳವಣಿಗೆಯನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತಾರೆ. ಮೈಕ್ರೋಸಾಫ್ಟ್ ಕಾರ್ಪ್ ಮತ್ತು ಹೋಂಡಾ ಮೋಟಾರ್ ಕಂಪನಿ ಸೇರಿದಂತೆ ವಿಶ್ವದ 500 ಅತಿದೊಡ್ಡ ಕಂಪನಿಗಳಲ್ಲಿ 300 ಕ್ಕೂ ಹೆಚ್ಚು ಕಂಪನಿಗಳು ಮಧ್ಯ ಚೀನಾದ ಪ್ರಮುಖ ಮಾರುಕಟ್ಟೆಗೆ ಪ್ರವೇಶ ಪಡೆಯಲು ವುಹಾನ್ ನಗರದಲ್ಲೇ ಕಾರ್ಯಾಚರಣೆ ನಡೆಸುತ್ತಿವೆ ಎಂದು ಸರ್ಕಾರದ ಮೂಲಗಳು ಹೇಳಿದೆ.
ವುಚಾಂಗ್, ಹಂಕೌ ಮತ್ತು ಹನ್ಯಾಂಗ್ ಎಂಬ ಮೂರು ಪ್ರಾಚೀನ ನಗರಗಳಿಂದ ವುಹಾನ್ ಮಹಾನಗರವು ರೂಪುಗೊಂಡಿದ್ದು, ಒಟ್ಟಿಗೆ ಬೆಳೆದ ಯಾಂಗ್ಟ್ಜೆ ಮತ್ತು ಹಾನ್ ನದಿಗಳು ಈ ನಗರದೊಳಗಿದೆ. ಸದ್ಯ ಲಾಕ್ಡೌನ್ನಿಂದಾಗಿ ಲಾಕ್ ಆಗಿದ್ದ ವುಹಾನ್ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಯಾಂಗ್ಟ್ಜಿ ನದಿಯಲ್ಲಿ ದೋಣಿ ಮೂಲಕ ಸರಕು ಸಾಗಾಣಿಕೆಯನ್ನು ಮರು ಆರಂಭ ಮಾಡಲಾಗಿದೆ.