ಕರ್ನಾಟಕ

karnataka

ETV Bharat / international

ಗಂಟಲು ನೋವೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್: ಅಲ್ಲಿ ಇದ್ದಿದ್ದಾರೂ ಏನು?

ಗಂಟಲು ನೋವಿನಿಂದ ಆಸ್ಪತ್ರೆಗೆ ಹೋದ ಮಹಿಳೆಯೊಬ್ಬಳ ಗಂಟಲಲ್ಲಿ ಜೀವಂತ ಹುಳ ಪತ್ತೆಯಾಗಿರುವ ಆಶ್ಚರ್ಯಕರ ಘಟನೆ ಜಪಾನ್​ನಲ್ಲಿ ನಡೆದಿದೆ. ಬಳಿಕ ವೈದ್ಯರು ಯಶಸ್ವಿಯಾಗಿ ಮಹಿಳೆಯ ಗಂಟಲಿನ ಎಡಭಾಗದಲ್ಲಿದ್ದ 1.5 ಇಂಚು ಉದ್ದದ ಜೀವಂತ ಹುಳವನ್ನು ಹೊರತೆಗೆದಿದ್ದಾರೆ.

Tonsil
ಟಾನ್ಸಿಲ್

By

Published : Jul 15, 2020, 2:11 PM IST

ಟೋಕಿಯೋ(ಜಪಾನ್​):ಮಹಿಳೆಯೊಬ್ಬಳು ಗಂಟಲಲ್ಲಿ ಏನೋ ಕಿರಿಕಿರಿಯಾಗುತ್ತಿದೆ ಎಂದು ವೈದ್ಯರಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ. ಈ ವೇಳೆ ವೈದ್ಯರು ಚಿಕಿತ್ಸೆ ನೀಡಿದಾಗ ಆಕೆಗೆ ನಂಬಲಾಸಾಧ್ಯ ಎಂಬಂತೆ ಗಂಟಲ ನೋವಿಗೆ ಕಾರಣ ತಿಳಿದು ಬಂದಿದೆ.

25 ವರ್ಷದ ಮಹಿಳೆಯೊಬ್ಬಳು ಕೆಲ ದಿನಗಳ ಹಿಂದೆ ವಿವಿಧ ರೀತಿಯ ಸೆಶಿಮಿ(ಒಂದು ಬಗೆಯ ಆಹಾರ) ಸೇವಿಸಿದ್ದಳು. ಆ ಬಳಿಕ ಗಂಟಲ ನೋವಿನ ಸಮಸ್ಯೆ ಬಂದಿತ್ತಂತೆ. ಹೀಗಾಗಿ ಟೋಕಿಯೋದ ಸೇಂಟ್ ಲ್ಯೂಕ್ಸ್ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ದೈಹಿಕ ಪರೀಕ್ಷೆಗೆ ಒಳಗಾಗಿದ್ದಾಳೆ. ಈ ವೇಳೆ, ಆಶ್ಚರ್ಯ ಎಂಬಂತೆ ಮಹಿಳೆಯ ಗಂಟಲಿನ ಎಡ ಭಾಗದ ಒಳಗೆ ಸುಮಾರು 1.5 ಇಂಚು ಉದ್ದದ ಕಪ್ಪು ಬಣ್ಣದ ಜೀವಂತ ಹುಳವೊಂದು ಪತ್ತೆಯಾಗಿದೆ. ಇದನ್ನು ನೋಡಿ ಮಹಿಳೆ ಮತ್ತು ವೈದ್ಯರು ಇಬ್ಬರೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಬಳಿಕ ವೈದ್ಯರು ವೈದ್ಯಕೀಯ​ ಸಾಧನಗಳನ್ನು ಬಳಸಿ ಹುಳವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಈ ಮಾಹಿತಿಯು ದಿ ಅಮೆರಿಕನ್ ಸೊಸೈಟಿ ಆಫ್ ಟ್ರಾಪಿಕಲ್ ಮೆಡಿಸಿನ್ ಆ್ಯಂಡ್​ ಹೈಜೀನ್​ನ ಲ್ಲಿ ಪ್ರಕಟಗೊಂಡಿದೆ.

ABOUT THE AUTHOR

...view details