ಅಮೆರಿಕ/ನವದೆಹಲಿ: ಚೀನಾ ಸುತ್ತಮುತ್ತಲ ದೇಶಗಳಲ್ಲಿ ‘ಸಾರ್ಸ್’ ಮಾದರಿಯ ನಿಗೂಢ ವೈರಸ್ ಪತ್ತೆಯಾಗಿದೆ. ಸೋಮವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಇದರೊಂದಿಗೆ ಈ ರೋಗಾಣು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಈ ಮಧ್ಯೆ ಈ ಮಾರಣಾಂತಿಕ ರೋಗಾಣು ಜಪಾನ್, ಥಾಯ್ಲೆಂಡ್ ಮತ್ತು ದಕ್ಷಿಣ ಕೊರಿಯಾದಲ್ಲೂ ಕಾಣಿಸಿಕೊಂಡಿದ್ದು, ಏಷ್ಯಾದ ದೇಶಗಳಲ್ಲಿ ತೀವ್ರ ಕಳವಳ ಮೂಡಿಸಿದೆ. ಜನವರಿ 25ರಂದು ಚೀನಾದಲ್ಲಿ ನಡೆಯುವ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ಹಿನ್ನೆಲೆಯಲ್ಲಿ ಈ ಸೋಂಕು ಮತ್ತಷ್ಟು ಮಂದಿಗೆ ಹಬ್ಬುವ ಆತಂಕವಿದೆ.