ಪ್ರಕೃತಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು, ಪರಿಸರ ರಕ್ಷಣೆಯಲ್ಲಿ ಸರ್ಕಾರಗಳನ್ನು, ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಸಲುವಾಗಿ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಕೋವಿಡ್ ಇಡೀ ಜಗತ್ತನ್ನೇ ಆವರಿಸಿಕೊಂಡಿರುವಾಗ ಭೂಮಿಯು ತನ್ನ ಸ್ವತ್ತನ್ನು ಮರಳಿ ಪಡೆಯಲು ಯತ್ನಿಸುತ್ತಿದೆ.
‘ಈ ವರ್ಷದ ಗುರಿ’
2021ರ ಪರಿಸರ ದಿನಾಚರಣೆಯಲ್ಲಿ ‘ಪರಿಸರ ವ್ಯವಸ್ಥೆಯನ್ನು ಪುನರ್ಸ್ಥಾಪಿಸುವುದು’. ಅಂದರೆ, ಮಾನವನ ಅತಿಯಾಸೆಗೆ ಅರಣ್ಯಗಳು ಅಳಿವಿನಂಚಿನಲ್ಲಿವೆ. ಹಾಗಾಗಿ ಎಲ್ಲರೂ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸಬೇಕಿದೆ. 2021ರಲ್ಲಿ ಪಾಕಿಸ್ತಾನವನ್ನು ವಿಶ್ವ ಪರಿಸರ ದಿನದ ಆತಿಥೇಯ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಹಾನಿಗೊಳಗಾಗಿರುವ ಪರಿಸರವನ್ನು ಪುನರುಜ್ಜೀವನಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಪಾಕ್ ಕರೆ ನೀಡಿದೆ.
ವಿಶ್ವ ಪರಿಸರ ದಿನದ ಇತಿಹಾಸ
ಪ್ರಕೃತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಪ್ರತಿ ವರ್ಷ ಜೂನ್ 5 ರಂದು ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. 1974 ರಲ್ಲಿ ಅಮೆರಿಕದಲ್ಲಿ ‘ಓನ್ಲಿ ಒನ್ ಅರ್ಥ್’ (ಒಂದೇ ಒಂದು ಭೂಮಿ) ಎಂಬ ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿವೆ.