ಕರ್ನಾಟಕ

karnataka

ETV Bharat / international

ಕಾಬೂಲ್ ಸ್ಫೋಟದಲ್ಲಿ ಸುದ್ದಿವಾಹಿನಿ ನಿರೂಪಕಿ ಬಲಿ.. ಕಂಬನಿ ಮಿಡಿದ ಮಾಧ್ಯಮರಂಗ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಸುದ್ದಿವಾಹಿನಿಯೊಂದರ ನಿರೂಪಕಿ ಹಾಗೂ ಅವರ ತಾಯಿ ಮೃತಪಟ್ಟಿದ್ದಾರೆ.

By

Published : Jun 5, 2021, 2:13 PM IST

Woman journalist among four people killed in Kabul blasts
ಕಾಬೂಲ್ ಸ್ಫೋಟದಲ್ಲಿ ಸುದ್ದಿವಾಹಿನಿ ನಿರೂಪಕಿ ಬಲಿ

ಕಾಬೂಲ್ (ಅಫ್ಘಾನಿಸ್ತಾನ):ಮೇ 3 ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಪತ್ರಕರ್ತೆ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

ಏರಿಯಾನ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ಮೀನಾ ಖೈರಿ ಮೃತ ಪತ್ರಕರ್ತೆಯಾಗಿದ್ದಾರೆ. ಮೀನಾ ಖೈರಿ ತನ್ನ ತಾಯಿ ಹಾಗೂ ಸಹೋದರಿ ಜೊತೆ ಶಾಪಿಂಗ್ ಮಾಡಲು ಹೋಗಿದ್ದ ವೇಳೆ ಐಇಡಿ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೀನಾರ ತಾಯಿಯೂ ಮೃತಪಟ್ಟಿದ್ದು, ಅವರ ಸಹೋದರಿ ಗಾಯಗೊಂಡಿದ್ದಾರೆ.

ಈ ವಿಚಾರವನ್ನು ಏರಿಯಾನ ನ್ಯೂಸ್‌ನ ಮುಖ್ಯಸ್ಥ ಶರೀಫ್ ಹಸನ್ಯಾರ್ ಖಚಿತಪಡಿಸಿದ್ದು, ಅನೇಕ ಮಾಧ್ಯಮ ವ್ಯಕ್ತಿಗಳು ಮೀನಾ ಸಾವಿಗೆ ಕಂಬನಿ ಮಿಡಿದಿದ್ದಾರೆ. ಕಾಬೂಲ್‌ನಲ್ಲಿ ಗುರುವಾರ ಎರಡು ಕಡೆ ಬಾಂಬ್​ ಸ್ಫೋಟ ನಡೆದಿದ್ದು, ಒಟ್ಟು 14 ಜನರು ಬಲಿಯಾಗಿದ್ದರು.

ABOUT THE AUTHOR

...view details