ಕರ್ನಾಟಕ

karnataka

By

Published : Jul 2, 2020, 2:48 PM IST

ETV Bharat / international

ಮುಳುವಾಯ್ತು ಭಾರತ ವಿರುದ್ಧದ ಹೇಳಿಕೆ... ನೇಪಾಳ ಪ್ರಧಾನಿ ಒಲಿ ಇಂದು ರಾಜೀನಾಮೆ?

ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ಭಾರತ ವಿರೋಧಿ ಹೇಳಿಕೆ ನೀಡಿದ್ದು, ಇದೀಗ ಈ ಹೇಳಿಕೆಗಳೇ ಅವರಿಗೆ ಮುಳುವಾಗಿ ಪರಿಣಮಿಸಿವೆ. ನೇಪಾಳದ ರಾಜಕೀಯ ಪಕ್ಷಗಳು ಒಲಿ ರಾಜೀನಾಮೆಗೆ ಆಗ್ರಹಿಸಿವೆ.

l PM Oli
ನೇಪಾಳ ಪ್ರಧಾನಿ ಒಲಿ

ಕಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗ್ತಿದೆ.

ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ, ಒಲಿ ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಆದರೆ ಇದಕ್ಕಾಗಿ ಸಮಯ ನಿಗದಿ ಆಗಿಲ್ಲ. ಕ್ಯಾಬಿನೆಟ್ ಸಭೆಯ ನಂತರ ರಾಜೀನಾಮೆ ಬಗ್ಗೆ ನಿರ್ಧರಿಸಲಾಗುವುದ ಎಂದು ಪ್ರಧಾನಿ ಸಚಿವಾಲಯದ ಮೂಲಗಳು ತಿಳಿಸಿವೆ.

ನೇಪಾಳದ ಸರ್ಕಾರ ಅಲ್ಲಿನ ಭೂಪಟವನ್ನು ಬದಲಾವಣೆ ಮಾಡಿ ಭಾರತದ ಭಾಗವನ್ನು ಸೇರಿಸಿಕೊಂಡಿರುವುದಕ್ಕೆ ನೇಪಾಳದ ರಾಜಕೀಯ ಪಕ್ಷಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಲ್ಲದೆ ಸ್ವತಃ ಕೆ ಪಿ ಶರ್ಮಾ ಒಲಿ ಭಾರತ ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು.

ಈ ಮಧ್ಯೆ ಒಲಿ ಇಂದು ಬೆಳಗ್ಗೆ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರನ್ನು ಭೇಟಿಯಾಗಲು ಶೀತಲ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಬಣವು ಒಲಿ ವಿರುದ್ಧ ಕಿಡಿಕಾರಿದೆ. ಒಟ್ಟು 44 ಸ್ಥಾಯಿ ಸಮಿತಿ ಸದಸ್ಯರಲ್ಲಿ 31 ಮಂದಿ ಒಲಿ ವಿರುದ್ಧ ನಿಂತಿರುವುದು ಇದೇ ಮೊದಲು ಎಂದು ನೇಪಾಳದ ಮಾಧ್ಯಮಗಳು ವರದಿ ಮಾಡಿವೆ.

ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್, ಮಾಧವ್ ನೇಪಾಳ, ಜಲಾನಾಥ್ ಖನಾಲ್ ಮತ್ತು ಬಾಂದೇವ್ ಗೌತಮ್ ಸೇರಿದಂತೆ ಹಿರಿಯ ನಾಯಕರು ವಿವಿಧ ವಿಷಯಗಳ ಬಗ್ಗೆ ಒಲಿ ವೈಫಲ್ಯವನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ.

ಹಿಮಾಲಯನ್ ಟೈಮ್ಸ್ ಪ್ರಕಾರ, ಮಂಗಳವಾರ ನಡೆದ ಎನ್‌ಸಿಪಿಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದಗಳು ನಡೆದಿದ್ದವು. ಏಕೆಂದರೆ ಒಲಿ ಅವರು ಇತ್ತೀಚೆಗೆ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಎಂದು ವರದಿಯಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಒಲಿ ಉತ್ತಮ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ತರಲು ವಿಫಲರಾಗಿದ್ದಾರೆ ಮತ್ತು ತಮ್ಮ ಪಕ್ಷವು ಬದ್ಧವಾಗಿರುವ ಸಮಾಜವಾದದ ಗುರಿಗಳನ್ನು ನಿರ್ಲಕ್ಷಿಸಿ ಬಂಡವಾಳಶಾಹಿ ನೀತಿಗಳನ್ನು ಅನುಸರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ABOUT THE AUTHOR

...view details