ಜಿನೇವಾ, ಸ್ವಿಟ್ಜರ್ಲ್ಯಾಂಡ್ :ಸುಮಾರು 37 ರಾಷ್ಟ್ರಗಳ ಕ್ಲಿನಿಕಲ್ ಡೇಟಾ ಸಂಗ್ರಹಣೆ ಮಾಡಿರುವ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಹೆಚ್ಒ) ಹೆಚ್ಐವಿ ಸೋಂಕಿತ ವ್ಯಕ್ತಿಗಳಿಗೆ ತಗುಲುವ ಕೋವಿಡ್ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಸಾಮಾನ್ಯ ರೋಗಿಗಳಿಗೆ ಹೋಲಿಸಿದರೆ ಹೆಚ್ಐವಿ ಸೋಂಕಿನೊಂದಿಗೆ ಬಳಲುತ್ತಿರುವ ರೋಗಿಗಳಲ್ಲಿ ಕೋವಿಡ್ ವೈರಸ್ ಸೋಂಕಿತರಲ್ಲಿ ಅಪಾಯದ ಮಟ್ಟ ಅಥವಾ ಸಾವಿನ ಪ್ರಮಾಣ ಶೇ.30ರಷ್ಟು ಹೆಚ್ಚಿರುತ್ತದೆ. ಹೀಗಾಗಿ, ಮುಂಜಾಗರೂಕತೆ ಅಗತ್ಯ ಎಂದು ಡಬ್ಲ್ಯೂಹೆಚ್ಒ ಹೇಳಿದೆ.
ಹೆಚ್ಐವಿಯೊಂದಿಗೆ ಬದುಕುತ್ತಿರುವ ರೋಗಿಗಳಲ್ಲಿ ಸಾಮಾನ್ಯವಾಗಿ ಮಧುಮೇಹ (ಸಕ್ಕರೆ ಕಾಯಿಲೆ) ಮತ್ತು ಅಧಿಕ ರಕ್ತದೊತ್ತಡ(ಬಿಪಿ) ಇರುತ್ತದೆ. ಅದರಲ್ಲೂ 65 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮರಣದ ಪ್ರಮಾಣ ಹೆಚ್ಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.