ಬೀಜಿಂಗ್, ಚೀನಾ :ಬಹುದಿನಗಳ ವಿವಾದದ ನಂತರ ಚೀನಾದ ವುಹಾನ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಹೆಚ್ಒ) ತಂಡ ಭೇಟಿ ನೀಡಿದ್ದು, ಕೊರೊನಾ ವೈರಸ್ನ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿದೆ.
ವುಹಾನ್ಗೆ ಭೇಟಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಬೈಶಾಝೌ ಮಾರುಕಟ್ಟೆಯಲ್ಲಿ ತಿರುಗಾಡಿ ಕೆಲ ಮಾಹಿತಿ ಸಂಗ್ರಹಿಸಿದೆ. ಈ ತಂಡಕ್ಕೆ ಚೀನಾದ ಅಧಿಕಾರಿಗಳು, ಪ್ರತಿನಿಧಿಗಳು ಸಾಥ್ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ತಂಡದಲ್ಲಿ ಪಶುವೈದ್ಯಕೀಯ, ವೈರಾಲಜಿ, ಆಹಾರ ಸುರಕ್ಷತೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಪರಿಣತಿ ಹೊಂದಿರುವ ಸದಸ್ಯರಿದ್ದು, ಎಲ್ಲಾ ರೀತಿಯಲ್ಲೂ ಪರಿಶೀಲನೆ ನಡೆಸಲಾಗಿದೆ.
ಇದನ್ನೂ ಓದಿ:ತ್ರಿವರ್ಣ ಧ್ವಜ ವಿಚಾರದಲ್ಲಿ ಪ್ರಧಾನಿ ಮೊಸಳೆ ಕಣ್ಣೀರು: ದಿಗ್ವಿಜಯ್ ಸಿಂಗ್
ಮೊದಲ ಬಾರಿಗೆ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ವುಹಾನ್ ಜಿನಿಂಟನ್ ಆಸ್ಪತ್ರೆ ಮತ್ತು ಹುಬೈ ಇಂಟಿಗ್ರೇಟೆಡ್ ಚೈನೀಸ್ ಅಂಡ್ ವೆಸ್ಟರ್ನ್ ಮೆಡಿಸಿನ್ ಆಸ್ಪತ್ರೆಗೆ ಭೇಟಿ ನೀಡಿ ಕೆಲ ಮಾಹಿತಿ ಕಲೆ ಹಾಕಿದ್ದಾರೆ.
ಕಳೆದ ಗುರುವಾರ ಟ್ವೀಟ್ ಮಾಡಿದ್ದ ವಿಶ್ವ ಆರೋಗ್ಯ ಸಂಸ್ಥೆ, ಚೀನಾಗೆ ಹೊರಡಲಿರುವ ನಮ್ಮ ಪ್ರತಿನಿಧಿಗಳು, ಸೋಂಕು ಮೊದಲ ಬಾರಿಗೆ ಕಾಣಿಸಿದ್ದ ಹೌನನ್ ಸೀಫುಡ್ ಮಾರ್ಕೆಟ್ ಮತ್ತು ಇತರ ಮಾರ್ಕೆಟ್ಗಳಿಗೆ ಭೇಟಿ ನೀಡಲಿದೆ. ಇದರ ಜೊತೆಗೆ ಕೆಲ ಆಸ್ಪತ್ರೆಗಳಲ್ಲೂ ತಪಾಸಣೆ ನಡೆಸಲಿದೆ ಎಂದಿತ್ತು.
ಇದರ ಜೊತೆಗೆ ಅತಿ ಮುಖ್ಯವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಇತರ ಪ್ರಯೋಗಾಲಯಗಳಿಗೂ ನಮ್ಮ ತಂಡ ಭೇಟಿ ನೀಡಲಿದೆ ಎಂದು ಟ್ವೀಟ್ನಲ್ಲಿ ಬರೆದುಕೊಳ್ಳಲಾಗಿತ್ತು.