ಕರ್ನಾಟಕ

karnataka

ETV Bharat / international

ವುಹಾನ್​​ನ ಮೊದಲ ಕೊರೊನಾ​ ಸೋಂಕಿತ ದಾಖಲಾಗಿದ್ದ ಆಸ್ಪತ್ರೆಗೆ ಡಬ್ಲ್ಯುಹೆಚ್‌ಒ ತಂಡ ಭೇಟಿ

ಒಂದು ವರ್ಷದ ಹಿಂದೆ ಮೊದಲ ಸೋಂಕಿತ ಹಾಗೂ ಕೊರೊನಾ ಸಾಂಕ್ರಾಮಿಕದ ಆರಂಭಿಕ ದಿನಗಳಲ್ಲಿ ಇತರರು ವೈರಸ್​ಗೆ ತುತ್ತಾಗಿ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿರುವ ಡಬ್ಲ್ಯುಹೆಚ್‌ಒ ತಜ್ಞರು ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

WHO team visits Wuhan hospital that had early virus patients
ವುಹಾನ್​​ನ ಮೊದಲ ಕೊರೊನಾ​ ಸೋಂಕಿತ ದಾಖಲಾಗಿದ್ದ ಆಸ್ಪತ್ರೆಗೆ ಡಬ್ಲ್ಯುಹೆಚ್‌ಒ ತಂಡ ಭೇಟಿ

By

Published : Jan 30, 2021, 12:58 PM IST

ವುಹಾನ್:ಕೊರೊನಾ ವೈರಸ್​​ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ತಜ್ಞರು ನಿನ್ನೆ ಚೀನಾದ ಮೊದಲ ಕೋವಿಡ್​ ಸೋಂಕಿತ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

2019ರ ಡಿಸೆಂಬರ್​ನಲ್ಲಿ ಮೊದಲ ಕೋವಿಡ್​ ಪ್ರಕರಣ ಚೀನಾದ ವುಹಾನ್​ನಲ್ಲಿ ವರದಿಯಾಗಿತ್ತು. ಇದರ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ವುಹಾನ್ ಭೇಟಿಯಲ್ಲಿರುವ ಡಬ್ಲ್ಯುಹೆಚ್‌ಒ ತಜ್ಞರು, ಚೀನಾದ ಅಧಿಕಾರಿಗಳೊಂದಿಗೆ ತಮ್ಮ ಸತ್ಯಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿನ್ನೆಯವರೆಗೆ ಅಂದರೆ ಚೀನಾಗೆ ಬಂದ 14 ದಿನಗಳ ವರೆಗೆ ಡಬ್ಲ್ಯುಹೆಚ್‌ಒ ತಂಡವು ಕ್ವಾರಂಟೈನ್​ನಲ್ಲಿತ್ತು. ಈ ವೇಳೆಯಲ್ಲಿ ಚೀನಾ ಅಧಿಕಾರಿಗಳೊಂದಿಗೆ ವರ್ಚುಯಲ್​ ಸಭೆಗಳನ್ನು ನಡೆಸುತ್ತಿತ್ತು.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆ ವಿರೂಪ: ಭಾರತದ ಖಂಡನೆ

ಕ್ವಾರಂಟೈನ್​ನಿಂದ ಮುಕ್ತರಾಗಿರುವ ತಜ್ಞರು ನಿನ್ನೆ ತಮ್ಮ ಕಾರ್ಯಾಚರಣೆಯ ಭಾಗವಾಗಿ ಒಂದು ವರ್ಷದ ಹಿಂದೆ ಸೋಂಕಿತರು ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ, ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಮುಂಬರುವ ದಿನಗಳಲ್ಲಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ವುಹಾನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲರ್​ ಸೇರಿದಂತೆ ವುಹಾನ್​ನ ಸುತ್ತಮುತ್ತಲಿನ ಪ್ರದೇಶಗಳಿಗೂ ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ.

ಇಂಟಿಗ್ರೇಟೆಡ್ ಚೈನೀಸ್ ಮತ್ತು ವೆಸ್ಟರ್ನ್ ಮೆಡಿಸಿನ್​​ನ ಹುಬೈ ಪ್ರಾಂತೀಯ ಆಸ್ಪತ್ರೆಯಲ್ಲಿ 2019ರ ಡಿಸೆಂಬರ್ 27ರಂದು ಡಾ. ಜಾಂಗ್ ಜಿಕ್ಸಿಯನ್ ಎಂಬ ವೈದ್ಯರು ಮೊದಲ ಬಾರಿ ಹೊಸ ಸೋಂಕಿನ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದರು. ಇದೇ ಆಸ್ಪತ್ರೆಗೆ ನಿನ್ನೆ ತಜ್ಞರು ಭೇಟಿ ನೀಡಿದ್ದಾರೆ.

ABOUT THE AUTHOR

...view details