ಕರ್ನಾಟಕ

karnataka

ETV Bharat / international

ಕೊರೊನಾ ಮೂಲ ಪತ್ತೆಗೆ ಚೀನಾದ ವೈರಸ್​ ಲ್ಯಾಬ್​ಗೆ WHO ತಂಡ ಭೇಟಿ: ಏನೆಲ್ಲಾ ಮಾಹಿತಿ ಸಂಗ್ರಹಿಸಿದೆ? - ಡಬ್ಲ್ಯುಎಚ್​ಒ ತಜ್ಞರು ಚೀನಾಕ್ಕೆ ಭೇಟಿ

ಕೋವಿಡ್ -19 ಸಾಂಕ್ರಾಮಿಕ ರೋಗದ ಮೂಲದ ಬಗ್ಗೆ ವಿಶ್ವದ ಅತ್ಯಂತ ಅಪಾಯಕಾರಿ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುವ ವುಹಾನ್ ವೈರಾಲಜಿ ಸಂಸ್ಥೆಯ ಮೇಲೆ ಅನುಮಾನ ವ್ಯಕ್ತವಾಗಿದ್ದರಿಂದ ಜಾಗತಿಕ ಆರೋಗ್ಯ ಒಕ್ಕೂಟದ ತಜ್ಞರ ತಂಡ ಭೇಟಿ ನೀಡಿ ತನಿಖೆಗೆ ಒಳಪಡಿಸುತ್ತಿದೆ.

WHO
WHO

By

Published : Feb 3, 2021, 1:41 PM IST

ಬೀಜಿಂಗ್(ಚೀನಾ)​: ವಿಶ್ವ ಆರೋಗ್ಯ ಸಂಸ್ಥೆಯ ತನಿಖಾಧಿಕಾರಿಗಳು ಬುಧವಾರ ಚೀನಾದ ವುಹಾನ್ ನಗರದ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದು, ಅಮೆರಿಕದ ಅಧಿಕಾರಿಗಳು ಕೊರೊನಾ ವೈರಸ್‌ನ ಮೂಲವಾಗಿರಬಹುದು ಎಂದು ಸೂಚಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಮೂಲದ ಬಗ್ಗೆ ವಿಶ್ವದ ಅತ್ಯಂತ ಅಪಾಯಕಾರಿ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುವ ವುಹಾನ್ ವೈರಾಲಜಿ ಸಂಸ್ಥೆಯ ಮೇಲೆ ಅನುಮಾನ ವ್ಯಕ್ತವಾಗಿದ್ದರಿಂದ ಜಾಗತಿಕ ಆರೋಗ್ಯ ಒಕ್ಕೂಟದ ತಜ್ಞರ ತಂಡ ಭೇಟಿ ನೀಡಿ ತನಿಖೆಗೆ ಒಳಪಡಿಸುತ್ತಿದೆ.

ಸಾಂಕ್ರಾಮಿಕ ರೋಗದ ಮೊದಲ ವರ್ಷದುದ್ದಕ್ಕೂ ಚೀನಾ ವಿಳಂಬ ಮಾಡಿದ ಅತ್ಯಂತ ಸೂಕ್ಷ್ಮ ವೈರಸ್ ಪ್ರಾಣಿಗಳಿಂದ ಮನುಷ್ಯನಿಗೆ ಹೇಗೆ ಹಬ್ಬಿತ್ತು ಎಂಬುದನ್ನು ಅನ್ವೇಷಿಸಲಿದೆ. ಆದರೆ, ಇಷ್ಟು ಸಮಯ ಕಳೆದ ನಂತರ ತಜ್ಞರು ಏನನ್ನು ಕಂಡು ಕೊಂಡಿದ್ದಾರೆ ಎಂಬ ಪ್ರಶ್ನೆಗಳು ಹಲವರಲ್ಲಿ ಉಳಿದುಕೊಂಡಿವೆ.

ಬೆಂಗಾವಲು ಪಡೆಯೊಂದಿಗೆ ತಜ್ಞರ ಕಾರುಗಳ ಬುಧವಾರ ಬೆಳಗ್ಗೆ ಮಂಜಿನಿಂದ ಆವೃತ್ತವಾದ ವೈರಾಲಜಿ ಸಂಸ್ಥೆ ಪ್ರವೇಶಿಸಲು ಭದ್ರತೆ ಹೆಚ್ಚಿಸಲಾಗಿತ್ತು. ಪತ್ರಕರ್ತರ ಸಂಕ್ಷಿಪ್ತ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಮೊದಲ ಕಾರನ್ನು ಬಲವಂತವಾಗಿ ಮುಂದೆ ತಳ್ಳಲಾಯಿತು.

ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಥಾಯಿ ಸಮಿತಿಗಳ 6 ವರದಿಗಳು ಮಂಡನೆ: ಯಾವುವು ಆ ವರದಿಗಳು?

ಡಬ್ಲ್ಯುಎಚ್‌ಒ ತಂಡದ ಸದಸ್ಯ ಪೀಟರ್ ದಾಸ್ಜಾಕ್ ಮಾತನಾಡಿ, ನಮ್ಮ ತಂಡವು ಬಹಳ ಫಲಪ್ರದವಾದ ದಿನಗಳನ್ನು ಎದುರು ನೋಡುತ್ತಿದೆ. ನಮಗೆ ತಿಳಿದಿರುವ ಎಲ್ಲ ಪ್ರಶ್ನೆಗಳನ್ನು ನಮಗೆ ನಾವು ಕೇಳಬೇಕಾಗಿದೆ ಎಂದು ಹೇಳಿದರು.

ಕೋವಿಡ್ -19 ಮೊದಲು ವುಹಾನ್‌ನಲ್ಲಿ ಹೊರಹೊಮ್ಮಿ ವಿಶ್ವಾದ್ಯಂತ ಎರಡು ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಬಾವಲಿಗಳಿಂದ ಹುಟ್ಟಿಕೊಂಡು ಇನ್ನೊಂದು ಸಸ್ತನಿ ಮೂಲಕ ಜನರಿಗೆ ಹಬ್ಬಿತೆ ಎಂದು ವಿಜ್ಞಾನಿಗಳು ಯೋಚಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಖಚಿತ ಉತ್ತರಗಳಿಲ್ಲ.

ಆ ಸಿದ್ಧಾಂತವನ್ನು ಪುರಸ್ಕರಿಸಲು ಯಾವುದೇ ಪುರಾವೆಗಳಿಲ್ಲದಿದ್ದರೂ ವುಹಾನ್‌ನ ಜೈವಿಕ ಸುರಕ್ಷತಾ ಪ್ರಯೋಗಾಲಯದಿಂದ ವೈರಸ್ ಆಕಸ್ಮಿಕವಾಗಿ ಸೋರಿಕೆಯಾಗಬಹುದೆಂದು ಸಾಂಕ್ರಾಮಿಕ ರೋಗದ ಆರಂಭದಲ್ಲಿ ಊಹಾಪೋಹಗಳು ಇದ್ದವು.

ಲ್ಯಾಬ್ ಥೇರಿ:

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಬೆಂಬಲಿಗರು ಆ ವದಂತಿಗಳಿಗೆ ಬಲವಾದ ಧ್ವನಿಗೂಡಿಸಿದರು. ಚೀನಾ ಉದ್ದೇಶಪೂರ್ವಕವಾಗಿ ವೈರಸ್ ಸೋರಿಕೆ ಮಾಡಿದೆ ಎಂಬ ಪಿತೂರಿ ಥೇರಿಗಳನ್ನು ಜಗತ್ತಿನಾದ್ಯಂತ ಹರಡಿಸಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಕಳೆದ ವರ್ಷ ಲ್ಯಾಬ್‌ನಿಂದ ವೈರಸ್ ಬಂದಿರುವುದಕ್ಕೆ "ಮಹತ್ವದ ಪುರಾವೆಗಳಿವೆ" ಎಂದರು. ಆದರೆ, ಇಲ್ಲಿಯ ತನಕ ಯಾವುದೇ ಪುರಾವೆಗಳನ್ನು ಬಿಡುಗಡೆ ಮಾಡಲಿಲ್ಲ.

ಡಬ್ಲ್ಯುಎಚ್‌ಒ ತಂಡವು ರಾಷ್ಟ್ರೀಯ ಜೈವಿಕ ಸುರಕ್ಷತಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಸಂಸ್ಥೆಯ ತಜ್ಞರೊಂದಿಗೆ ಅವರ ದೈನಂದಿನ ಕೆಲಸ - ಕಾರ್ಯ, ಅಂತಾರಾಷ್ಟ್ರೀಯ ವೈಜ್ಞಾನಿಕ ಸಹಕಾರ, ಸಾಂಕ್ರಾಮಿಕ ವಿರೋಧಿ ಪ್ರಯತ್ನಗಳು ಮತ್ತು ಕೊಡುಗೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದೆ ಎಂದು ಚೀನಾದ ಸರ್ಕಾರಿ ಪ್ರಸಾರ ಸಿಜಿಟಿಎನ್ ಹೇಳಿದೆ.

ABOUT THE AUTHOR

...view details