ಮನಿಲಾ(ಫಿಲಿಪೈನ್ಸ್) :ಇಡೀ ಜಗತ್ತಿನ ಮತ್ತೊಂದು ತಲ್ಲಣಕ್ಕೆ ಕಾರಣವಾಗಿರುವ ಕೋವಿಡ್‌ನ ರೂಪಾಂತರಿ ಒಮಿಕ್ರೋನ್ ನಿಧಾನವಾಗಿ ಹಲವು ದೇಶಗಳಲ್ಲಿ ಹರಡುತ್ತಿದೆ. ಈಗಾಗಲೇ ಬಹುತೇಕ ದೇಶಗಳು ಹೊಸ ವೈರಸ್ ತಡೆಗೆ ಮಹತ್ತರ ನಿರ್ಧಾರಗಳನ್ನು ಕೈಗೊಂಡಿವೆ.
ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ದೇಶಗಳ ಗಡಿ ಪ್ರದೇಶಗಳಲ್ಲಿ ಡೆಲ್ಟಾ ರೂಪಾಂತರಿ ವಿರುದ್ಧ ಕೈಗೊಂಡಿದ್ದ ಕ್ರಮಗಳನ್ನು ಒಮಿಕ್ರೋನ್ ವಿರುದ್ಧವೂ ಅನುಸರಿಸಬೇಕು ಎಂದು ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಪೆಸಿಫಿಕ್‌ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು, ಬಹುತೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹಾಗೂ ಸಾವುಗಳು ಕಡಿಮೆಯಾಗಿರುವಾಗ ಕೆಲವು ಪ್ರಾದೇಶಿಕ ದೇಶಗಳಲ್ಲಿ ಕೊರೊನಾ ಹೊಸ ಪ್ರಕಣಗಳು ಉಲ್ಬಣಗೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಪೆಸಿಫಿಕ್‌ನ ಡಬ್ಲ್ಯೂಹೆಚ್‌ಒನ ಪ್ರಾದೇಶಿಕ ನಿರ್ದೇಶಕ ಡಾ. ತಕೇಶಿ ಕಸಾಯಿ, ಗಡಿಗಳಲ್ಲಿ ಸೂಕ್ತವಾದ ಕ್ರಮಗಳನ್ನು ಕೈಗೊಂಡರೆ ವೈರಸ್ ಹರಡುವಿಕೆಯನ್ನು ತಡೆಯಬಹುದು. ಆದರೆ, ಪ್ರತಿಯೊಂದು ದೇಶ ಹಾಗೂ ಸಮುದಾಯವೂ ಹೊಸದಾಗಿ ಉಲ್ಬಣವಾಗುವ ಸೋಂಕಿನ ವಿರುದ್ಧ ಹೋರಾಟಕ್ಕೆ ಸಿದ್ಧರಾಗಬೇಕು ಅಂತಲೂ ಹೇಳಿದ್ದಾರೆ.