ಜಿನೇವಾ: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸಾಕಷ್ಟು ಆತಂಕ ಮೂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಬುಧವಾರ ವುಹಾನ್ನಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಕುರಿತು ತುರ್ತು ಸಭೆ ನಡೆಸಿದ್ದು, ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.
ಚೀನಾದಲ್ಲಿ ಆತಂಕ ಮೂಡಿಸಿದ ಕೊರೊನಾ ವೈರಸ್... ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಭೆ
ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸಾಕಷ್ಟು ಆತಂಕ ಮೂಡಿಸಿದೆ. ಡಬ್ಲ್ಯುಎಚ್‌ಒ ತುರ್ತು ಸಮಿತಿಯು ಬುಧವಾರ ವುಹಾನ್ನಲ್ಲಿ ಕೊರೊನಾ ವೈರಸ್ ನಿಯಂತರಿಸುವ ಕುರಿತು ಸಭೆ ನಡೆಸಿದ್ದು, ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್, ಈ ವೈರಸ್ ಸಾಕಷ್ಟು ಆತಂಕ ಮೂಡಿಸಿದ್ದು, ಅಂತಾರಾಷ್ಟ್ರೀಯ ವೈದ್ಯಕೀಯ ತುರ್ತುಪರಿಸ್ಥಿತಿ ಘೋಷಿಸಬೇಕೇ ಬೇಡವೇ ಎಂಬುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೊರೊನಾ ವೈರಸ್ ಹುಟ್ಟಿದ ಚೀನಾದ ವುಹಾನ್ ನಗರದಲ್ಲಿ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಇಲ್ಲಿನ ನಿವಾಸಿಗಳು ಎಲ್ಲಿಯೂ ಪ್ರಯಾಣ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ವುಹಾನ್ ನಗರದಲ್ಲಿ ಕೆಲವರು ನ್ಯುಮೋನಿಯಾಗೆ ಒಳಗಾಗಿದ್ದರು. ಆದರೆ ಇದರ ಕಾರಣಗಳು ನಿಗೂಢವಾಗಿವೆ ಎಂಬ ಮಾಹಿತಿಯನ್ನ ಅಧಿಕಾರಿಗಳು, ಚೀನಾದಲ್ಲಿರು ವಿಶ್ವ ಆರೋಗ್ಯ ಸಂಸ್ಥೆ ಕಚೇರಿಗೆ ತಿಳಿಸಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದ ಈ ರೋಗಕ್ಕೆ ಕೊರೊನಾ ವೈರಸ್ ಕಾರಣ ಎಂಬುದನ್ನ 2019ರ ನವೆಂಬರ್ನಲ್ಲಿ ತಿಳಿಸಿದ್ದರು.