ತನ್ನ ಓರಗೆಯ 17ರ ಹರೆಯದ ಯುವಕರು ಆಟ, ಪಾಠ ಅಂತಾ ಖುಷಿಯ ಜೀವನ ಸಾಗಿಸುತ್ತಿದ್ದರು. ಆದರೆ ಈ ಯುವಕ ಅತ್ಯಂತ ದಪ್ಪ ಹೊಂದಿದ್ದು ಚಲಿಸಲೂ ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದ. ಅಂದಹಾಗೆ, ಈತನ ಹೆಸರು ಖಲೀದ್ ಮೊಹ್ಸೆನ್ ಅಲ್ ಶೇರಿ. ಈ ಯುವಕ ಬರೋಬ್ಬರಿ 609 ಕೆಜಿ ತೂಕ ತೂಗುತ್ತಿದ್ದ.
ಸೌದಿ ಅರೇಬಿಯಾದ ಈ ಯುವಕ ಮೂರು ವರ್ಷಗಳ ಕಾಲ ಹಾಗೆಯೇ ಹಾಸಿಗೆ ಮೇಲೆ ತನ್ನ ಜೀವನ ಸಾಗಿಸುತ್ತಿದ್ದನಂತೆ. ಒಂದೊಮ್ಮೆ, 610 ಕೆಜಿ ತೂಕದ ಖಲೀದ್‌ನನ್ನು ತಮ್ಮ ಮನೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಸಹಾಯ ಪಡೆಯಬೇಕಾಗಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ ಅನಾಹುತ
ಸೌದಿಯ ದಿವಂಗತ ರಾಜ ಅಬ್ದುಲ್ಲಾ ಅವರ ಆದೇಶದ ಮೇರೆಗೆ ಖಲೀದ್ಗೆ ಆಸ್ಪತ್ರೆಯಲ್ಲಿ ತೂಕ ಇಳಿಕೆಯ ಚಿಕಿತ್ಸೆಗೆ ಅವಕಾಶ ಸಿಕ್ಕಿತು. 30 ಮಂದಿ ನುರಿತ ವೈದ್ಯಕೀಯ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಯ ತಂಡವು ಖಲೀದ್‌ನನ್ನು ರಕ್ಷಿಸಿತು.
ಹೀಗೆ ಚಿಕಿತ್ಸೆ ದೊರೆತ ಕೇವಲ ಆರು ತಿಂಗಳಲ್ಲೇ ಖಲೀದ್ ಅರ್ಧಕ್ಕಿಂತ ಹೆಚ್ಚು ದೇಹದ ತೂಕವನ್ನು ಕಳೆದುಕೊಂಡರು. ಕಟ್ಟುನಿಟ್ಟಾದ ಆಹಾರ ಕ್ರಮ, ನಿರಂತರ ವ್ಯಾಯಾಮ ಮಾಡಿದರು. ಖಲೀದ್ ಆರಂಭದಲ್ಲಿ ಚಲಿಸಲು ತುಂಬಾನೇ ಕಷ್ಟಪಟ್ಟರು. ಬಳಿಕ ಚಲನೆಗಾಗಿ ಗಾಲಿಕುರ್ಚಿಯ ಮೊರೆ ಹೋದರು.
ಮಧ್ಯದಲ್ಲಿ ಕುಳಿತಿರುವ ಖಲೀದ್ ಮೊಹ್ಸೆನ್ ಅಲ್ ಶೇರಿ ಆದರೆ ಇದರ ಫಲವಾಗಿ ಅವರು ನಂಬಲಾಗದ ತೂಕ ನಷ್ಟವನ್ನು ದಾಖಲಿಸುತ್ತಾ ಸಾಗಿದರು. ಇದೇ ವೇಳೆ, 2018 ರಲ್ಲಿ ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರಿಗೆ 29 ವರ್ಷ ವಯಸ್ಸು. ಸದ್ಯ ದೇಹದ ತೂಕ 63 ಕೆಜಿಗೆ ಇಳಿದಿದೆ!.