ಇಸ್ಲಾಮಾಬಾದ್:ಕೊರೊನಾ ವೈರಸ್ ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗೆ ತಮ್ಮ ಒಗ್ಗಟ್ಟಿನ ಅಭಿಮತ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಮಾರಕ ಅಲೆಯನ್ನು ಎದುರಿಸುತ್ತಿರುವ ಭಾರತೀಯ ಜನರೊಂದಿಗೆ ನನ್ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ ಎಂದು ಇಮ್ರಾನ್ ಖಾನ್ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ಮಾರಕ ಅಲೆ ಎದುರಿಸುತ್ತಿರುವ ಭಾರತೀಯ ಜನರೊಂದಿಗೆ ನನ್ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ. ನಮ್ಮ ನೆರೆಹೊರೆಯವರು ಸೇರಿದಂತೆ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರ ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಮಾನವೀಯತೆಯ ಈ ಉಪದ್ರವವನ್ನು ನಾವು ಒಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುವಂತೆ ಪಾಕಿಸ್ತಾನದ ನಾಗರಿಕ ಸಮಾಜ ಮತ್ತು ಮಾನವೀಯ ಸಂಸ್ಥೆ ಎಡಿ ಫೌಂಡೇಶನ್ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಈ ಟ್ವೀಟ್ ಮಾಡಿದ್ದಾರೆ.
ಎಡಿ ಫೌಂಡೇಷನ್‌ನ ಅಧ್ಯಕ್ಷ ಫೈಸಲ್ ಎಡಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಆತ ಆ್ಯಂಬುಲೆನ್ಸ್‌ಗಳ ಜತೆಗೆ ವೈದ್ಯಕೀಯ ಪ್ರವೇಶಕ್ಕೆ ಅನುಮತಿ ನೀಡಲು ಕೋರಿದ್ದಾರೆ. ವೈದ್ಯಕೀಯ ತಂತ್ರಜ್ಞರು, ಕಚೇರಿ ಸಿಬ್ಬಂದಿ, ಚಾಲಕರು ಮತ್ತು ಪೋಷಕ ಸಿಬ್ಬಂದಿ ಒಳಗೊಂಡ ತಂಡ ಹೊಂದಿದೆ. ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ತಾವಾಗಿಯೇ ವ್ಯವಸ್ಥೆಗೊಳಿಸುವುದಾಗಿ ಎಡಿ ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಂಕ್ರಾಮಿಕವು ನಿಮ್ಮ ದೇಶದ ಮೇಲೆ ಉಂಟುಮಾಡಿದ ಅಸಾಧಾರಣವಾದ ಭಾರಿ ಪರಿಣಾಮದ ಬಗ್ಗೆ ಕೇಳಲು ನಮಗೆ ತುಂಬಾ ವಿಷಾದವಿದೆ. ಅಲ್ಲಿ ಅಪಾರ ಸಂಖ್ಯೆಯ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ನಾವು ನಮ್ಮ ಸಹಾಯವನ್ನು ನೌಕಾಪಡೆಯ ರೂಪದಲ್ಲಿ ನೀಡಲು ಬಯಸುತ್ತೇವೆ. ಪ್ರಸ್ತುತ ಆರೋಗ್ಯ ಪರಿಸ್ಥಿತಿಗಳನ್ನು ಪರಿಹರಿಸಲು ಮತ್ತು ಮತ್ತಷ್ಟು ತಪ್ಪಿಸಲು ನಿಮಗೆ ಸಹಾಯ ಮಾಡಲು ನಮ್ಮ ಸೇವೆಗಳೊಂದಿಗೆ 50 ಆ್ಯಂಬುಲೆನ್ಸ್ಗಳಿವೆ ಎಂದರು.
ಪಾಕಿಸ್ತಾನವು ಕಳೆದ 24 ಗಂಟೆಗಳಲ್ಲಿ 157 ಸಾವು ವರದಿ ಮಾಡಿದ್ದು, ಈ ಮೂಲಕ ಕೋವಿಡ್-19 ಸಾವಿನ ಸಂಖ್ಯೆ 16,999 ಗಡಿ ದಾಟಿದೆ. ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 5,908ಕ್ಕೆ ತಲುಪಿದ್ದು, ಪಾಕಿಸ್ತಾನದಲ್ಲಿ ಸೋಂಕಿನ ಪ್ರಮಾಣ 7, 90,016ಕ್ಕೆ ತಲುಪಿದೆ.