ಮಾಸ್ಕೋ: ಸೋವಿಯತ್ ರಷ್ಯಾಕ್ಕೆ ನಾಜಿ ಆಕ್ರಮಣ ಮಾಡಿದ 79ನೇ ವಾರ್ಷಿಕೋತ್ಸವದ ಅಂಗವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾಸ್ಕೋದಲ್ಲಿ ಸೈನಿಕರ ಸಮಾಧಿಗೆ ಮಾಲಾರ್ಪಣೆ ಮಾಡಿದ್ದಾರೆ.
'ಮಹಾ ದೇಶಭಕ್ತಿಯ ಯುದ್ಧ'... ಸೈನಿಕರ ಸಮಾಧಿಗೆ ಪುಟಿನ್ ಪುಷ್ಪ ನಮನ - ಮಹಾ ದೇಶಭಕ್ತಿಯ ಯುದ್ಧ
ನಾಜಿಗಳು ರಷ್ಯಾವನ್ನು ಆಕ್ರಮಣ ಮಾಡಿದ 79ನೇ ವಾರ್ಷಿಕೋತ್ಸವದ ಅಂಗವಾಗಿ ಯುದ್ಧದಲ್ಲಿ ಮಡಿದ ಸೈನಿಕರ ಸಮಾಧಿಗೆ ಅಧ್ಯಕ್ಷ ಪುಟಿನ್ ಮಾಲಾರ್ಪಣೆ ಮಾಡಿದ್ದಾರೆ.
!['ಮಹಾ ದೇಶಭಕ್ತಿಯ ಯುದ್ಧ'... ಸೈನಿಕರ ಸಮಾಧಿಗೆ ಪುಟಿನ್ ಪುಷ್ಪ ನಮನ Putin attends events marking 'Great Patriotic War'](https://etvbharatimages.akamaized.net/etvbharat/prod-images/768-512-7724110-835-7724110-1592831055530.jpg)
ಸೈನಿಕನ ಸಮಾಧಿಗೆ ಪುಟಿನ್ ಪುಷ್ಪ ನಮನ
ಸೈನಿಕರ ಸಮಾಧಿಗೆ ಪುಟಿನ್ ಪುಷ್ಪ ನಮನ
ಇದಕ್ಕೂ ಮುನ್ನ ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಮತ್ತು ರಕ್ಷಣಾ ಸಚಿವರೊಂದಿಗೆ ರಾಜಧಾನಿಯ ಹೊರಗೆ ಇರುವ ರಷ್ಯಾದ ಸಶಸ್ತ್ರ ಪಡೆಗಳ ಹೊಸ ಚರ್ಚ್‌ಗೆ ಪುಟಿನ್ ಭೇಟಿ ನೀಡಿದ್ದರು.
ಕ್ಯಾಥೆಡ್ರಲ್ ಎದುರಿನ ಚೌಕದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ರಷ್ಯಾ ಜಯ ಗಳಿಸಿದ್ದು ತುಂಬಾ ಪವಿತ್ರವಾದದ್ದಾಗಿದೆ ಎಂದಿದ್ದಾರೆ. ರಷ್ಯಾದಲ್ಲಿ ಮಹಾ ದೇಶಭಕ್ತಿಯ ಯುದ್ಧ ಎಂದು ಕರೆಯಲ್ಪಡುವ ಎರಡನೇ ವಿಶ್ವ ಯುದ್ಧದಲ್ಲಿ 27 ಮಿಲಿಯನ್ಗೂ ಅಧಿಕ ನಾಗರಿಕರು ಸಾವಿಗೀಡಾಗಿದ್ದಾರೆ.