ಕರ್ನಾಟಕ

karnataka

ETV Bharat / international

Watch- ಇಂಡೋನೇಷ್ಯಾ ಜ್ವಾಲಾಮುಖಿ: ಈವರೆಗೆ 13 ಮಂದಿ ಸಾವು

ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದ್ದು, ಈವರೆಗೆ 13 ಮಂದಿ ಮೃತಪಟ್ಟಿದ್ದಾರೆ. ಅನೇಕರು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ.

Indonesia volcano
ಇಂಡೋನೇಷ್ಯಾ ಜ್ವಾಲಾಮುಖಿ

By

Published : Dec 5, 2021, 2:27 PM IST

ಜಕಾರ್ತ (ಇಂಡೋನೇಷ್ಯಾ):ಪ್ರಚಂಡ ಜ್ವಾಲಾಮುಖಿಗೆ ಇಂಡೋನೇಷ್ಯಾ ತತ್ತರಿಸಿದ್ದು, ಈವರೆಗೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕರು ತೀವ್ರವಾಗಿ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ವಿಪತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ (ಮೌಂಟ್​ ಸೆಮೇರು) ಲಾವಾರಸ ಸ್ಫೋಟಿಸಿದ್ದು, ಕರಗಿದ ಬೂದಿಯಂತೆ ಜ್ವಾಲಾಮುಖಿಯು ಪೂರ್ವ ಜಾವಾ ಪ್ರಾಂತ್ಯದ ಹತ್ತಿರದ 11 ಹಳ್ಳಿಗಳನ್ನು ಆವರಿಸಿದೆ. ಜನರು ಭಯಭೀತರಾಗಿ ಓಡಿಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಜವಾದ್ ಚಂಡಮಾರುತ : ಮಧ್ಯಾಹ್ನದ ವೇಳೆಗೆ ಒಡಿಶಾದ ಪುರಿಗೆ ತಲುಪುವ ನಿರೀಕ್ಷೆ

ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮನೆಗಳೆಲ್ಲ ಲಾವಾರಸದಲ್ಲಿ ಮುಳುಗಿಹೋಗಿವೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದ್ದು, ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಅವರನ್ನು ಇರಿಸಲಾಗಿದೆ.

ABOUT THE AUTHOR

...view details