ಬೀಜಿಂಗ್(ಚೀನಾ): ಈವರೆಗೆ ಚೀನಾವನ್ನು ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಇದೀಗ ವಿಶ್ವದಾದ್ಯಂತ ತನ್ನ ಕಬಂಧ ಬಾಹು ಚಾಚುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನಿಯನ್ನರು ವೈದ್ಯಕೀಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇಟಲಿಯನ್ನರು ನಿವೃತ್ತಿ ಹೊಂದಿರುವ ವೈದ್ಯರನ್ನು ಕೆಲಸಕ್ಕೆ ಆಹ್ವಾನಿಸುತ್ತಿದ್ದಾರೆ. ದಕ್ಷಿಣ ಕೊರಿಯಾದಲ್ಲಿ 10 ಕೋಟಿ ಜನ ಪರಿಹಾರ ಕಾರ್ಯಕ್ಕಾಗಿ ಸಿದ್ಧವಾಗಿದ್ದಾರೆ.
ಮಧ್ಯಪ್ರಾಚ್ಯ, ಯುರೋಪ್ ಮತ್ತು ದಕ್ಷಿಣ ಕೊರಿಯಾದಲ್ಲಿ ಅಣಬೆ ರೀತಿ ಈ ವೈರಸ್ ಹಬ್ಬುತ್ತಿದೆ. ಆದ್ರೆ ಚೀನಾದಲ್ಲಿ ರೋಗಪೀಡಿತರು ಗುಣಮುಖರಾಗಿ ಮನೆಗೆ ತೆರಳುತ್ತಿರುವುದು ಆಶಾದಾಯಕವಾಗಿದೆ.
ಯುಎಸ್ನಲ್ಲಿ ಲಸಿಕೆಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಅಲ್ಲಿಯ ವೈದ್ಯರಲ್ಲಿ ಭಯವನ್ನು ಹುಟ್ಟುಹಾಕಿದೆ. ನಾವು ಗುರುತಿಸಲಾಗದ ಪ್ರದೇಶದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಾಯಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಮಂಗಳವಾರ ಮತ್ತೆ 851 ಹೊಸ ಪ್ರಕರಣಗಳು ಕಂಡು ಬಂದಿವೆ. ಒಟ್ಟಾರೆ 5,186 ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಸಿಯೋಲ್‌ನ ರಾಜಧಾನಿಯಲ್ಲಿ, ಡ್ರೈವ್-ಥ್ರೂ ವೈರಸ್ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರು ರಕ್ಷಣಾತ್ಮಕ ಸೂಟ್ ಮತ್ತು ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವದಾದ್ಯಂತ 90,000 ಕ್ಕೂ ಹೆಚ್ಚು ಜನರು ಈ ಸೋಂಕಿನಿಂದ ಅಸ್ವಸ್ಥರಾಗಿದ್ದರೆ, 3,100 ಜನರು ವೈರಸ್ನಿಂದ ಸಾವನ್ನಪ್ಪಿದ್ದಾರೆ. ಅಂದಾಜು 70 ದೇಶಗಳಲ್ಲಿ ಈ ವೈರಸ್ ಕಂಡುಬಂದಿದ್ದು, ಉಕ್ರೇನ್ನಲ್ಲೂ ಕೂಡ ಕಾಣಿಸಿಕೊಂಡಿದೆ.