ಕರ್ನಾಟಕ

karnataka

By

Published : Feb 15, 2022, 10:34 AM IST

ETV Bharat / international

ನೋಡಿ: ಹಾರಾಟದ ವೇಳೆ ಏರ್​ ಏಷ್ಯಾ ವಿಮಾನದಲ್ಲಿ ಹರಿದಾಡಿದ ಹಾವು, ಮುಂದೇನಾಯ್ತು?

ಏರ್​ ಏಷ್ಯಾ ಸಂಸ್ಥೆಯ ಏರ್​ಬಸ್ ಎ320-200 ವಿಮಾನದ ಕೌಲಲಾಂಪುರದಿಂದ ತವೌಗೆ ತೆರಳುವಾಗ ಹಾವು ಪತ್ತೆಯಾಗಿದ್ದು, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

Viral video:  Snake inside  the Air Asia flight
ಏರ್​ ಏಷ್ಯಾ ವಿಮಾನದಲ್ಲಿ ಪತ್ತೆಯಾದ ಹಾವು.. ಮುಂದೆನಾಯ್ತು..?

ಸಾಮಾನ್ಯವಾಗಿ ವಾತಾವರಣದಲ್ಲಿ ಏರುಪೇರು ಅಥವಾ ತಾಂತ್ರಿಕ ದೋಷಗಳು ಕಂಡು ಬಂದಾಗ ವಿಮಾನಗಳ ಮಾರ್ಗಗಳು ಬದಲಾಗುತ್ತವೆ. ಆದರೆ ಹಾವೊಂದು ವಿಮಾನದ ಮಾರ್ಗವನ್ನೇ ಬದಲಾಯಿಸಿಬಿಟ್ಟಿದೆ. ಕೌಲಲಾಂಪುರದಿಂದ ತವೌಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವು ಕಾಣಿಸಿಕೊಂಡು ಅವಾಂತರ ಸೃಷ್ಟಿಯಾಗಿತ್ತು.

ಏರ್​ ಏಷ್ಯಾ ಸಂಸ್ಥೆಯ ಏರ್​ಬಸ್ ಎ320-200 ವಿಮಾನ ಕೌಲಲಾಂಪುರದಿಂದ ತವೌಗೆ (ಎರಡೂ ಕೂಡಾ ಮಲೇಷಿಯಾ ದೇಶದ ನಗರಗಳು) ತೆರಳುವಾಗ ಆಕಸ್ಮಿಕವಾಗಿ ಹಾವು ಕಾಣಿಸಿಕೊಂಡಿತು. ಈ ವಿಚಾರ ಪೈಲೆಟ್​ಗೆ ತಿಳಿದ ತಕ್ಷಣ ಕಚ್ಚಿಂಗ್ ನಗರಕ್ಕೆ ವಿಮಾನವನ್ನು ತಿರುಗಿಸಿ, ಹಾವನ್ನು ರಕ್ಷಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಹನಾ ಮೊಹ್ಸಿನ್ ಖಾನ್ ಎಂಬ ಪೈಲೆಟ್ 'ವಿಮಾನದಲ್ಲಿ ಹಾವು.. ಪ್ರಯಾಣಿಕರ ಲಗೇಜಿನಿಂದ ತಪ್ಪಿಸಿಕೊಂಡು ವಿಮಾನ ಹತ್ತಿರಬಹುದು. ವಿಮಾನ ಲ್ಯಾಂಡ್ ಆಗುವವರೆಗೆ 'ಆ ಡ್ಯೂಡ್' ಅಲ್ಲಿಯೇ ಇದ್ದ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ವಿಮಾನ ಪತನ: ಓರ್ವ ಸಾವು, ಏಳು ಮಂದಿ ಕಣ್ಮರೆ

ಈ ವೇಳೆ ಯಾರಿಗೂ ಅಪಾಯವಾಗಿಲ್ಲ. ಎಲ್ಲಾ ಪ್ರಯಾಣಿಕರನ್ನು ಅಂದಿನ ದಿನವೇ ಅದೇ ವಿಮಾನದಲ್ಲಿ ತವೌಗೆ ತಲುಪಿಸಲಾಗಿದೆ. ಯಾವುದೇ ವಿಮಾನದಲ್ಲಾದರೂ, ಇದೊಂದು ಅತ್ಯಪರೂಪದ ಪ್ರಕರಣ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಚಾನೆಲ್ ನ್ಯೂ ಏಷಿಯಾ ವರದಿ ಮಾಡಿದೆ.

ABOUT THE AUTHOR

...view details