ಹೈದರಾಬಾದ್:ಯುದ್ಧಪೀಡಿತ ಆಫ್ಘನ್ನಿಂದ ಅಮೆರಿಕ ತನ್ನ ಸೇನೆ ಹಿಂತೆಗೆದುಕೊಂಡಿದ್ದರಿಂದ ಭಾರತ ಮತ್ತು ಇತರೆ ನೆರೆಯ ರಾಷ್ಟ್ರಗಳಿಗೆ ಆತಂಕ ಮತ್ತು ಭದ್ರತಾ ಅನಿಶ್ಚಿತತೆ ಎದುರಿಸುತ್ತಿವೆ.
ಚೀನಾ-ಪಾಕ್-ತಾಲಿಬಾನ್ ದೋಸ್ತಿ
ಚೀನಾ, ಪಾಕಿಸ್ತಾನ, ಇರಾನ್ ದಂಗೆಕೋರರೊಂದಿಗೆ ತಾಲಿಬಾನ್ ಉತ್ತಮ ಬಾಂಧವ್ಯಹೊಂದಿದೆ. ಈ ಹಿನ್ನೆಲೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗಾಗಿ ಮಿತ್ರ ರಾಷ್ಟ್ರಗಳು ಕಾಯುತ್ತಿವೆ.
ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ ಅಂದಿನಿಂದ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ತಮ್ಮ ಜನರನ್ನು ಆಫ್ಘನ್ನಿಂದ ಸ್ಥಳಾಂತರಿಸಲು ಹರಸಾಹಸ ಪಡುತ್ತಿವೆ. ಆದರೆ, ಕಾಬೂಲ್ ಏರ್ಪೋರ್ಟ್ನಲ್ಲಿ ತಾಲಿಬಾನ್ ತಮ್ಮ ಸಿಬ್ಬಂದಿಯನ್ನು ಹೆಚ್ಚಿಸಿದ್ದು, ದೇಶವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
ದೋಸ್ತಿ ನಡುವೆಯೂ ಬಂಡುಕೋರರ ಆಟ.. ಚೀನಾ-ಪಾಕ್ಗೆ ‘ತಾಲಿಬಾನ್’ ಸಂಕಟ
1990 ಕ್ಕೆ ಹೋಲಿಸಿದರೆ, ತಾಲಿಬಾನ್ ಈ ಬಾರಿ ಭಿನ್ನವಾಗಿದೆ. ಅಮೆರಿಕ ಸೇನೆ ವಾಪಸ್ ಆದ ನಂತರ, ದೇಶದಲ್ಲಿ ತಾಲಿಬಾನ್ ವಿಜಯೋತ್ಸವ ಆಚರಿಸಿದೆ. ಅಲ್ಲದೇ, ಇತರ ಪ್ರಬಲ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲು ಮುಂದಾಗಿವೆ. ಅಫ್ಘಾನಿಸ್ತಾನದ ನೆರೆಹೊರೆಯ ಬಹುತೇಕ ದೇಶಗಳು ಬಂಡುಕೋರರನ್ನು ಎದುರಿಸುತ್ತಿವೆ. ಅಂತಹ ಬಂಡುಕೋರರಿಗೆ ತಾಲಿಬಾನ್ ಧೈರ್ಯ ತುಂಬುತ್ತಿದೆ. ಒಂದೆಡೆ ಪಾಕ್, ಚೀನಾ, ಇರಾನ್ ತಾಲಿಬಾನ್ಗೆ ಬೆಂಬಲ ನೀಡುತ್ತಿವೆಯಾದರೂ, ಈ ಮೂರು ರಾಷ್ಟ್ರಗಳಲ್ಲಿರುವ ಉಗ್ರರಿಗೆ ತಾಲಿಬಾನ್ ಬೆಂಬಲ ನೀಡುತ್ತಿದೆ ಎನ್ನಲಾಗಿದೆ.
ಚೀನಾಗೆ ಬಿಸಿತುಪ್ಪವಾದ ‘ತಾಲಿಬಾನ್’
ಚೀನಾಕ್ಕೆ, ಬದಕ್ಷನ್ ಪ್ರಾಂತ್ಯವು ತಲೆನೋವಾಗಿದೆ. ಅಲ್ಲಿ ETIM (ಪೂರ್ವ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್) ಹೋರಾಟಗಾರರು ತಾಲಿಬಾನ್‌ನೊಂದಿಗೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ಹೋರಾಡಿದರು. ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದ ಉಯ್ಘರ್ ಮುಸ್ಲಿಮರಿಗಾಗಿ ETIM ಹೋರಾಡುತ್ತದೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಜೊತೆ 95 ಕಿಲೋಮೀಟರ್ ಗಡಿಯನ್ನು ಬದಕ್ಷನ್ ಹಂಚಿಕೊಂಡಿದೆ. ಅದೇ ರೀತಿಯಲ್ಲಿ ಚೆಚೆನ್ ಹೋರಾಟಗಾರರ ಕಾಕಸಸ್ ಎಮಿರೇಟ್ಸ್ ರಷ್ಯಾಕ್ಕೆ ಕಳವಳಕ್ಕೆ ಕಾರಣವಾಗಿದೆ.
ಪಾಕ್ಗೆ ಅತ್ತದರಿ-ಇತ್ತಪುಲಿ
ಪಾಕಿಸ್ತಾನದಲ್ಲಿ ತೆಹ್ರಿಕ್ - ಇ - ತಾಲಿಬಾನ್ ಅಟ್ಟಹಾಸ ಮಿತಿಮೀರಿದೆ. ಇದರಿಂದಾಗಿ ದೇಶದಲ್ಲಿ ಮಾನವ ಮತ್ತು ಆರ್ಥಿಕ ಸಂಕಷ್ಟ ಉಂಟು ಮಾಡಿದೆ. ಈ ಉಗ್ರಪಡೆಯು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಅರಾಜಕತೆ ಸೃಷ್ಟಿಸಿದೆ. ಅಮೆರಿಕದ ವಿರುದ್ಧದ ತಾಲಿಬಾನ್ ಹೋರಾಟದ ವೇಳೆ ಟಿಟಿಪಿಯು ಕೈ ಜೋಡಿಸಿತ್ತು ಎಂದು ತಿಳಿದು ಬಂದಿದೆ.
ಭಾರತಕ್ಕೂ ತಾಲಿಬಾನಿಗಳ ಆತಂಕ
ತಾಲಿಬಾನ್‌ನೊಂದಿಗೆ ಯಾವುದೇ ಸಂಪರ್ಕ ಹೊಂದಿರದ ಭಾರತಕ್ಕೀಗ ಹೆಚ್ಚು ಆತಂಕ ಎದುರಾಗಿದೆ. ಪಾಕಿಸ್ತಾನದ ISI ನ ಆದೇಶದ ಮೇರೆಗೆ ಅಥವಾ ಅದರ ಮಿಲಿಟರಿ ಉಪಕರಣದ ಮೂಲಕ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ದಂಗೆಕೋರ ಗುಂಪುಗಳ ಸಂಪೂರ್ಣ ನಿಯಂತ್ರಣವನ್ನು ತಾಲಿಬಾನ್ ಹೊಂದಿದೆ. ಕಾಶ್ಮೀರದಲ್ಲಿರುವ ಬಂಡುಕೋರರಿಗೆ ತಾಲಿಬಾನಿಗಳ ಬೆಂಬಲವಿದೆ. ಕಾಶ್ಮೀರದಲ್ಲಿ ಸಕ್ರಿಯರಾಗಿದ್ದ ಮೂವರು ಉಗ್ರರನ್ನು ಭಾರತ ಬಂಧಿಸಿತ್ತು.
ಈ ಹಿನ್ನೆಲೆ ಉಗ್ರಪಡೆಯು 1999 ರಲ್ಲಿ ಕಂದಹಾರ್ನಲ್ಲಿ 814 ಏರ್ ಇಂಡಿಯಾ ವಿಮಾನದ ಪ್ರಯಾಣಿಕರನ್ನು ಅಪಹರಿಸಿತ್ತು. ಅಲ್ಲದೇ, ನಮ್ಮವರನ್ನು ಬಿಟ್ಟರೆ ಮಾತ್ರ ಪ್ರಯಾಣಿಕರನ್ನು ರಿಲೀಸ್ ಮಾಡುವುದಾಗಿ ಬಂಡುಕೋರರು ಘೋಷಿಸಿದ್ದರು. ಬಳಿಕ ಅವರ ಬೇಡಿಕೆಗೆ ಭಾರತ ಒಪ್ಪಿತ್ತು. ಬಂಧಿತ ಉಗ್ರರಲ್ಲಿ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮೌಲಾನಾ ಮಸೂದ್ ಕೂಡ ಇದ್ದರು.
ಕಾಶ್ಮೀರ ದಂಗೆಗೆ ಬೆಂಬಲ?
ಈಗ ಜೈಶ್ ಕಮಾಂಡರ್ ಮಸೂದ್ ಅಝಾರ್ ಕಾಶ್ಮೀರ ದಂಗೆಯನ್ನು ಬೆಂಬಲಿಸಲು ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದ್ದಾನೆ. ಆಫ್ಘನ್ನಲ್ಲಿ ತಾಲಿಬಾನ್ ನಾಯಕತ್ವವನ್ನು ಘೋಷಿಸಿದ ಬಳಿಕ ಮಸೂದ್, ಕಂದಹಾರ್ಗೆ ತೆರಳಿದ್ದು, ಚರ್ಚೆ ನಡೆಸುತ್ತಿದ್ದಾನೆ. ಅಝಾರ್ ತಾಲಿಬಾನ್ನ ದಂಗೆಕೋರರಲ್ಲಿ ಪ್ರಮುಖರು.
‘ಪ್ರತ್ಯೇಕತಾವಾದಿಗಳ ಮಾತನ್ನು ನಂಬುವ ಕಾಶ್ಮೀರಿಗರು’
1990 ರ ಅವಧಿಗೆ ಹೋಲಿಸಿದರೆ ಕಾಶ್ಮೀರದ ಸ್ಥಿತಿ ಸಂಪೂರ್ಣ ಬದಲಾಗಿದೆ. 2019 ರ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಅಲ್ಲಿನ ಜನತೆ ಭಾರತೀಯ ನಾಯಕತ್ವದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಈಗ ಅವರು ಪ್ರತ್ಯೇಕತಾವಾದಿಗಳ ಮಾತನ್ನು ಜಾಸ್ತಿ ನಂಬುತ್ತಾರೆ.
ಕಾಶ್ಮೀರದಲ್ಲಿ ಬಂಡಾಯದ ಕಾರ್ಯಸಾಧ್ಯತೆಯನ್ನು ನಿರ್ಬಂಧಿಸಲು ಸರ್ಕಾರವು ಕಾಶ್ಮೀರದ ಯೋಜನೆಯನ್ನು ಹೊಂದಿರಬೇಕು. ಕಾಶ್ಮೀರ ವಿಚಾರಗಳಲ್ಲಿ ತಾಲಿಬಾನ್ ಮಧ್ಯಪ್ರವೇಶವನ್ನು ತಡೆಯಲು ವಿದೇಶಾಂಗ ನೀತಿ ತಜ್ಞರು ಮತ್ತು ಸಂಧಾನಕಾರರ ರಾಜತಾಂತ್ರಿಕ ಚಾಣಾಕ್ಷತೆಯನ್ನು ಅವಲಂಬಿಸಿರುತ್ತದೆ.