ದೋಹಾ (ಕತಾರ್) :ತಾಲಿಬಾನ್ ಮತ್ತು ಅಮೆರಿಕ ದೇಶದ ನಡುವೆ ಐತಿಹಾಸಿಕ ಕದನ ವಿರಾಮ ಒಪ್ಪಂದಕ್ಕೆ ಇಂದು ಕತಾರ್ನ ದೋಹಾದಲ್ಲಿ ಸಹಿ ಬೀಳಲಿದೆ. ಅಪಘಾನಿಸ್ತಾನದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಸಮರಕ್ಕೆ ಪೂರ್ಣ ವಿರಾಮ ಇಡಲಾಗುತ್ತಿದ್ದು, ಈ ಕ್ಷಣಕ್ಕೆ ಭಾರತ ಸೇರಿ 30 ರಾಷ್ಟ್ರಗಳ ರಾಯಭಾರಿಗಳು ಸಾಕ್ಷಿಯಾಗಲಿದೆ.
ಈ ಐತಿಹಾಸಿಕ ಒಪ್ಪಂದದ ಬಗ್ಗೆ 2001ರಿಂದಲೂ ಚರ್ಚೆ ನಡೆಯುತ್ತಿದ್ದರೂ ಇದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಕದನ ವಿರಾಮದ ಮುಖ್ಯ ಧ್ಯೇಯವೇ ಅಲ್ ಖೈದಾದಂತಹ ಭಯೋತ್ಪಾದಕ ಗುಂಪುಗಳನ್ನು ಆಶ್ರಯಿಸದಂತೆ ತಾಲಿಬಾನ್‌ನಿಂದ ಬದ್ಧತೆ ಪಡೆದುಕೊಳ್ಳುವುದಾಗಿದೆ.