ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆ ಹಿಂದಕ್ಕೆ ಪಡೆದ ನಂತರವೂ ಸುಮಾರು 2,500 ಸಾವಿರ ಸೈನಿಕರನ್ನು ಅಲ್ಲಿಯೇ ನಿಯೋಜಿಸಬೇಕೆಂದು ಜೋ ಬೈಡನ್ಗೆ ಸಲಹೆ ನೀಡಲಾಗಿತ್ತು ಎಂದು ಅಮೆರಿಕ ಮಿಲಿಟರಿ ಅಧಿಕಾರಿಯೊಬ್ಬರು ಅಮೆರಿಕ ಸಂಸತ್ಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆರ್ಮಿ ಜನರಲ್ ಆಸ್ಟಿನ್ ಮಿಲ್ಲರ್ ಸಲಹೆಯಂತೆ ಅಫ್ಘಾನಿಸ್ತಾನದಲ್ಲಿ ಸುಮಾರು 2,500 ಮಂದಿ ಸೈನಿಕರನ್ನು ಅಲ್ಲಿಯೇ ಬಿಡಲು ಜಂಟಿ ಸೇನಾ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೇ ಮತ್ತು ಅಮೆರಿಕದ ಅಮೆರಿಕನ್ ಸೆಂಟ್ರಲ್ ಕಮಾಂಡ್ ಜನರಲ್ ಫ್ರಾಂಕ್ ಮೆಕೆಂಜಿ ಒಪ್ಪಿಕೊಂಡಿದ್ದರೂ, ಬೈಡನ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ನೀಡಲು ನೀಡಲು ಸಾಧ್ಯವಾಗಲಿಲ್ಲ ಎಂದು ದಿ ಹಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಅಮೆರಿಕದಲ್ಲಿ ಸೇನಾ ಹಿಂತೆಗೆತ ಬಗ್ಗೆ ಬೈಡನ್ ಘೋಷಿಸಿದಾಗ 'ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ಜೋ ಬೈಡನ್ ಅವರೊಂದಿಗೆ ಹಂಚಿಕೊಂಡಿಲ್ಲ. ಆದರೂ ಪ್ರಾಮಾಣಿಕ ಅಭಿಪ್ರಾಯವನ್ನು ನೀಡಿದ್ದೆ. ಅಫ್ಘಾನಿಸ್ತಾನದಲ್ಲಿ 2,500 ಸೈನಿಕರನ್ನು ನಿಯೋಜನೆ ಮಾಡಲು ನಾನು ಶಿಫಾರಸು ಮಾಡಿದ್ದೇನೆ. ಇದಕ್ಕೂ ಮೊದಲೇ 2020ರಲ್ಲಲಿ 4,500 ಮಂದಿಯನ್ನ ನಿಯೋಜನೆ ಮಾಡಲು ನಾನು ಶಿಫಾರಸು ಮಾಡಿದ್ದೆನು. ಇದೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮೆಕೆಂಜಿ ಹೇಳಿದ್ದಾರೆ.