ಕರ್ನಾಟಕ

karnataka

By

Published : Sep 9, 2021, 6:44 AM IST

ETV Bharat / international

ಪಾಕಿಸ್ತಾನದ ಮೇಲೆ ಅಮೆರಿಕ ನಿರ್ಬಂಧ ವಿಧಿಸಬೇಕು: ಅಮೆರಿಕ​ ಸಂಸದನ ಒತ್ತಾಯ

ಪಾಕಿಸ್ತಾನ​ ತಾಲಿಬಾನಿಗಳಿಗೆ ಸಹಕಾರ ನೀಡುತ್ತಿರುವುದು ಕಂಡುಬಂದರೆ, ನಾವು ಪಾಕಿಸ್ತಾನಕ್ಕೆ ನೀಡುತ್ತಿರುವ ಎಲ್ಲ ನೆರವನ್ನು ಕಡಿತಗೊಳಿಸಿ, ನಿರ್ಬಂಧ ವಿಧಿಸಬೇಕು ಎಂದು ಅಮೆರಿಕದ ಜನಪ್ರತಿನಿಧಿಯೊಬ್ಬರು ಆಗ್ರಹಿಸಿದ್ದಾರೆ.

us-lawmaker-seeks-sanctions-against-pak-for-aiding-taliban-offensive-in-panjshir
ಪಾಕಿಸ್ತಾನದ ಮೇಲೆ ಅಮೆರಿಕ ನಿರ್ಬಂಧ ವಿಧಿಸಬೇಕು: ಯುಎಸ್​ ಕಾಂಗ್ರೆಸ್ ಸದಸ್ಯ

ವಾಷಿಂಗ್ಟನ್(ಅಮೆರಿಕ) :ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ತಲೆ ಎತ್ತಿದೆ. ಆದರೂ ತಾಲಿಬಾನ್​ನ ಪಂಜ್​ಶೀರ್​ ಪ್ರಾಂತ್ಯ ವಶಕ್ಕೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದು, ಅಲ್ಲಿ ಸಾಕಷ್ಟು ವಿಧ್ವಂಸಕ ಕೃತ್ಯಗಳನ್ನು ತಾಲಿಬಾನ್​ ಸೃಷ್ಟಿಸಿದೆ ಎಂಬ ಆರೋಪ ಕೇಳಿಬಂದಿದೆ.

ಪಂಜ್​​ಶೀರ್​ನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ತಾಲಿಬಾನಿಗಳಿಗೆ ಪಾಕಿಸ್ತಾನ ಸಹಕಾರ ನೀಡುತ್ತಿದ್ದು, ಅಮೆರಿಕ ಸರ್ಕಾರ ಪಾಕಿಸ್ತಾನದ ಮೇಲೆ ನಿರ್ಬಂಧ ವಿಧಿಸಬೇಕೆಂದು ಅಮೆರಿಕದ ಜನಪ್ರತಿನಿಧಿಯೊಬ್ಬರು ಆಗ್ರಹಿಸಿದ್ದಾರೆ.

ಅಮೆರಿಕ ಕಾಂಗ್ರೆಸ್ ಸದಸ್ಯ ಆಡ್ಯಂ ಕಿನ್ಜಿಂಗರ್ 'ಪಾಕ್​ ತಾಲಿಬಾನಿಗಳಿಗೆ ಸಹಕಾರ ನೀಡುತ್ತಿರುವುದು ಕಂಡುಬಂದರೆ, ನಾವು ಪಾಕಿಸ್ತಾನಕ್ಕೆ ನೀಡುತ್ತಿರುವ ಎಲ್ಲ ನೆರವನ್ನು ಕಡಿತಗೊಳಿಸಿ, ನಿರ್ಬಂಧ ವಿಧಿಸಬೇಕು. ಪಾಕಿಸ್ತಾನವೇ ತಾಲಿಬಾನ್​​ ಅನ್ನು ಸೃಷ್ಟಿಸಿ, ಈಗ ರಕ್ಷಿಸುವ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ 27 ಹೆಲಿಕಾಪ್ಟರ್​ಗಳು, ಸ್ಪೆಷಲ್ ಫೋರ್ಸ್​ ಮತ್ತು ಡ್ರೋನ್​ಗಳನ್ನು ತಾಲಿಬಾನಿಗಳಿಗೆ ಪೂರೈಸಿದೆ ಎಂದು CENTCOM ಮೂಲವನ್ನು ಉಲ್ಲೇಖಿಸಿ, ಫಾಕ್ಸ್​​ ನ್ಯೂಸ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಿನ್ಜಿಂಜರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಪಿಹೆಚ್​​ಡಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ಬೆಲೆ ಇಲ್ಲ : ತಾಲಿಬಾನ್​ ಶಿಕ್ಷಣ ಸಚಿವ

ABOUT THE AUTHOR

...view details