ಕರ್ನಾಟಕ

karnataka

ETV Bharat / international

ಬೈಡನ್​ ಅಧಿಕಾರ ಸ್ವೀಕಾರದ ಬಳಿಕ ಮೊದಲ ಬಾರಿ ನಡೆದ ಯುಎಸ್​ - ಚೀನಾ ಮುಖಾಮುಖಿ ಚರ್ಚೆ - ecretary of State Antony Blinken

ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಸಮಸ್ಯೆಗಳು, ಇಂಡೊ – ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದು, ಟಿಬೆಟ್, ಹಾಂಕಾಂಗ್ ಮತ್ತು ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿನ ವ್ಯಾಪಾರದಿಂದ ಮಾನವ ಹಕ್ಕುಗಳವರೆಗೆ ಚೀನಾ ಹಸ್ತಕ್ಷೇಪ, ತೈವಾನ್‌ನಾದ್ಯಂತ ಚೀನಾದ ಪ್ರತಿಪಾದನೆ ವಿವಾದಗಳ ಬಗ್ಗೆ ಯುಎಸ್ ಮತ್ತು ಚೀನಾದ ಉನ್ನತ ಅಧಿಕಾರಿಗಳು ಗುರುವಾರ ಮಾತುಕತೆ ನಡೆಸಿದರು.

US, China
ಯುಎಸ್​-ಚೀನಾ ಮುಖಾಮುಖಿ ಚರ್ಚೆ

By

Published : Mar 19, 2021, 9:39 AM IST

ಆಂಕಾರೇಜ್ (ಯುಎಸ್): ಅಧ್ಯಕ್ಷ ಜೋ ಬೈಡನ್ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಯುಎಸ್ ಮತ್ತು ಚೀನಾದ ಉನ್ನತ ಅಧಿಕಾರಿಗಳು ಗುರುವಾರದಂದು ಮಾತುಕತೆ ನಡೆಸಿದರು.

ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಯಾಂಗ್ ಜೀಚಿ ಅವರು ಅಲಾಸ್ಕಾದಲ್ಲಿ ಚರ್ಚಿಸಿದರು.

ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಸಮಸ್ಯೆಗಳು, ಇಂಡೊ – ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದು, ಟಿಬೆಟ್, ಹಾಂಕಾಂಗ್ ಮತ್ತು ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿನ ವ್ಯಾಪಾರದಿಂದ ಮಾನವ ಹಕ್ಕುಗಳವರೆಗೆ ಚೀನಾ ಹಸ್ತಕ್ಷೇಪ, ತೈವಾನ್‌ನಾದ್ಯಂತ ಚೀನಾದ ಪ್ರತಿಪಾದನೆಯ ವಿವಾದಗಳ ಬಗ್ಗೆ ಭಿನ್ನಾಭಿಪ್ರಾಯ ಸಂಬಂಧ ಮಾತುಕತೆ ನಡೆದಿದೆ.

ಚೀನಾದ ಹೆಚ್ಚುತ್ತಿರುವ ಸರ್ವಾಧಿಕಾರ, ವಿದೇಶಗಳಲ್ಲಿ ಮೇಲೆ ಹೇರುತ್ತಿರುವ ಒತ್ತಡಗಳನ್ನ ಕೈ ಬಿಡುವಂತೆ ಬೈಡನ್​ ಆಡಳಿತ ಸೂಚಿಸಿದೆ ಎಂದು ಬ್ಲಿಂಕೆನ್ ಹೇಳಿದರು.


.

ABOUT THE AUTHOR

...view details