ಕರ್ನಾಟಕ

karnataka

ETV Bharat / international

ರಾಷ್ಟ್ರೀಯ ಭದ್ರತಾ ವಾದಗಳನ್ನು ಯುಎಸ್ ದುರುಪಯೋಗ ಪಡಿಸಿಕೊಳ್ಳುತ್ತಿದೆ:ಚೀನಾ - ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್

ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಆರ್ಥಿಕತೆಯ ನಿಯಮಗಳನ್ನು ಅಮೆರಿಕಾ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ದೂರಿದ್ಧಾರೆ. ಅಲ್ಲದೆ, ಅಮೆರಿಕಾ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ವಿದೇಶಿ ಉದ್ಯಮಗಳನ್ನು ನಿಗ್ರಹಿಸಲು ರಾಷ್ಟ್ರೀಯ ಭದ್ರತೆ ಪರಿಕಲ್ಪನೆಯನ್ನು ಸರಳೀಕರಿಸಬೇಕೆಂದು ಸಲಹೆ ನೀಡಿದ್ದಾರೆ.

blacklist
ಚೀನಾ

By

Published : Dec 5, 2020, 6:09 PM IST

ಬೀಜಿಂಗ್: ದೈತ್ಯ ಕಂಪನಿಗಳನ್ನು ಬ್ಲ್ಯಾಕ್​ಲಿಸ್ಟ್​ಗೆ ಸೇರಿಸಿದ್ದರಿಂದ ಅಮೆರಿಕದ ವಿರುದ್ಧ ಚೀನಾ ತಿರುಗಿಬಿದ್ದಿದೆ. ರಾಷ್ಟ್ರೀಯ ಭದ್ರತಾ ವಾದಗಳನ್ನು ಅಮೆರಿಕ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಆರ್ಥಿಕತೆಯ ನಿಯಮಗಳನ್ನು ಅಮೆರಿಕ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ದೂರಿದ್ಧಾರೆ. ಅಲ್ಲದೆ, ಅಮೆರಿಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ವಿದೇಶಿ ಉದ್ಯಮಗಳನ್ನು ನಿಗ್ರಹಿಸಲು ರಾಷ್ಟ್ರೀಯ ಭದ್ರತೆ ಪರಿಕಲ್ಪನೆಯನ್ನು ಸರಳೀಕರಿಸಬೇಕೆಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ :ಚೀನಾಗೆ ಯುಎಸ್ ಶಾಕ್: ಮತ್ತೆ 4 ಕಂಪನಿಗಳು ಕಪ್ಪು ಪಟ್ಟಿಗೆ ಸೇರ್ಪಡೆ

ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅಮೆರಿಕಾ ಕೈಗೊಂಡಿರುವ ನಿರ್ಧಾರಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಅಂತರರಾಷ್ಟ್ರೀಯ ನಿಗಮ (SMIC) ಪ್ರಮುಖ ಪಾತ್ರ ವಹಿಸುತ್ತದೆ. ಬೇಹುಗಾರಿಕೆ ಮತ್ತು ತಂತ್ರಜ್ಞಾನ ಕಳವು ಆರೋಪಗಳ ಬಗ್ಗೆ ಯುಎಸ್ ವ್ಯಾಪಕವಾದ ಹತಾಶೆ ಹೊಂದಿದೆ. ಈ ನೀತಿಯಲ್ಲಿ ಬೈಡನ್​​​​ ಸ್ವಲ್ಪ ಬದಲಾವಣೆ ತಂದರೆ ಒಳಿತು ಅನ್ನೋದು ಹುವಾ ಚುನೈಂಗ್ ಅಭಿಪ್ರಾಯ.

ಕಳೆದ ಜೂನ್​​ನಲ್ಲಿ ಚೀನಾದ 20 ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಅದರಲ್ಲಿ ಹುವಾವೇ ಮತ್ತು ಹಿಕ್ವಿಷನ್ ಡಿಜಿಟಲ್​ ಟೆಕ್ನಾಲಜಿ ಕಂಪನಿ ಕೂಡ ಸೇರಿದ್ದವು. ಈ ಎರಡೂ ಕಂಪನಿಗಳು ಮಿಲಿಟರಿ ಸಂಬಂಧಿತ ಸಂಶೋಧನೆಗಳಲ್ಲಿ ಭಾಗಿಯಾಗಿಲ್ಲ ಎಂದು ಹುವಾ ಚುನೈಂಗ್ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details