ಕರ್ನಾಟಕ

karnataka

ETV Bharat / international

ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಅಮೆರಿಕ ಡಬಲ್‌ ಗೇಮ್‌.. ಉತ್ತರ ಕೊರಿಯಾ ಹೀಗಂತು..

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ವಿಚಾರದಲ್ಲಿ ಉತ್ತರಕೊರಿಯಾ, ಅಮೆರಿಕ ವಿರುದ್ಧ ಮುಗಿ ಬಿದ್ದಿದೆ. ಈ ಯುದ್ದಕ್ಕೆ ಅಮೆರಿಕವೇ ಮೂಲ ಕಾರಣ ಎಂದಿದೆ ಉತ್ತರಕೊರಿಯಾ..

Root Cause Of Crisis...": North Korea On Russian Invasion Of Ukraine
ರಷ್ಯಾ-ಉಕ್ರೇನ್‌ ಯುದ್ಧ ವಿಚಾರದಲ್ಲಿ ಅಮೆರಿಕ ಡಬಲ್‌ ಗೇಮ್‌..! ಉತ್ತರ ಕೊರಿಯಾ ಹೇಳಿದ್ದೇನು?

By

Published : Feb 28, 2022, 12:16 PM IST

ಸಿಯೋಲ್‌ :ಅತಿ ಸಣ್ಣ ದೇಶ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದಕ್ಕೆ ಅಮೆರಿಕವೇ ಮೂಲ ಕಾರಣ ಎಂದು ಉತ್ತರ ಕೊರಿಯಾ ಗಂಭೀರ ಆರೋಪ ಮಾಡುವ ಜೊತೆಗೆ ರಷ್ಯಾ ಪರ ನಿಂತಿದೆ.

ಉಕ್ರೇನ್‌ ಮೇಲೆ ತನ್ನ ಸೇನೆಯನ್ನು ಕಳುಹಿಸಿದ ರಷ್ಯಾ ಜಾಗತಿಕ ಆಕ್ರೋಶಕ್ಕೆ ಗುರಿಯಾಯಿತು. ಕೆಲ ರಾಷ್ಟ್ರಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ನಿಂತಿದ್ದಾರೆ.

ರಷ್ಯಾ ಪರ ನಿಲ್ಲುವ ಮೂಲಕ ಉಕ್ರೇನ್‌ ಬಿಕ್ಕಟ್ಟಿನ ಮೂಲ ಕಾರಣ ಅಮೆರಿಕದ ಹೆಚ್ಚಿನ ಕೈವಾಡ ಹಾಗೂ ನಿರಂಕುಶತೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್‌ವೊಂದನ್ನು ಅಪ್‌ಲೋಡ್ ಮಾಡಲಾಗಿದೆ.

ಯುಎಸ್‌ ಡಬಲ್ ಸ್ಟ್ಯಾಂಡರ್ಡ್ ಹೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಇದು ಶಾಂತಿ ಮತ್ತು ಸ್ಥಿರತೆಯ ಹೆಸರಿನಲ್ಲಿ ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದೆ ಎಂದು ಆರೋಪಿಸಿದೆ.

ಆದರೆ, ಯಾವುದೇ ಒಳ್ಳೆಯ ಕಾರಣವಿಲ್ಲದೆ ಇತರ ದೇಶಗಳು ಕೈಗೊಂಡ ಸ್ವಯಂ-ರಕ್ಷಣಾ ಕ್ರಮಗಳನ್ನು ಖಂಡಿಸಲಾಗುತ್ತದೆ. ಯುಎಸ್ ಸರ್ವೋಚ್ಛ ಆಳ್ವಿಕೆ ನಡೆಸುತ್ತಿದ್ದ ದಿನಗಳು ಕಳೆದುಹೋಗಿವೆ ಎಂದು ಹೇಳಿದೆ. ಯುದ್ಧ ಸಾರಿರುವ ರಷ್ಯಾ ವಿರುದ್ಧ ಹಲವು ದೇಶಗಳು ನಿರ್ಬಂಧಗಳನ್ನು ವಿಧಿಸಿವೆ.

ನಾರ್ತ್ ಸೊಸೈಟಿ ಫಾರ್ ಇಂಟರ್‌ನ್ಯಾಶನಲ್ ಪಾಲಿಟಿಕ್ಸ್ ಸ್ಟಡಿಯಲ್ಲಿ ಸಂಶೋಧಕರಾದ ರಿ ಜಿ ಸಾಂಗ್‌ ಪ್ರಕಾರ, ಯುಎಸ್‌ ತನ್ನ ಭದ್ರತೆಗಾಗಿ ರಷ್ಯಾದ ಕಾನೂನುಬದ್ಧ ಬೇಡಿಕೆಯನ್ನು ಕಡೆಗಣಿಸಿ ಸೇನಾ ಪ್ರಾಬಲ್ಯವನ್ನು ಅನುಸರಿಸಿದೆ ಎಂದು ಹೇಳಿದ್ದಾರೆ.

ಚೀನಾ ಜೊತೆಗೆ ಉತ್ತರ ಕೊರಿಯಾ ಕೂಡ ರಷ್ಯಾಗೆ ಆಪ್ತ ಸ್ನೇಹ ರಾಷ್ಟ್ರಗಳಲ್ಲಿ ಒಂದಾಗಿದೆ. ಪರಮಾಣು ಸಜ್ಜಿತ ಉತ್ತರ ಕೊರಿಯಾದ ಮೇಲೆ ಹೆಚ್ಚುತ್ತಿರುವ ಒತ್ತಡದ ವಿರುದ್ಧ ರಷ್ಯಾ, ಕೊರಿಯಾ ಪರ ನಿಂತಿದೆ.

ಮಾನವೀಯ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ಪರಿಹಾರವನ್ನು ಕೇಳುತ್ತಿದೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾದ ಪ್ರಮುಖ ಮಿತ್ರರಾಷ್ಟ್ರ ಚೀನಾ ಕೂಡ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ಬಿಕ್ಕಟ್ಟನ್ನು ಹೆಚ್ಚಿಸುತ್ತಿವೆ ಎಂದು ದೂಷಿಸಿತ್ತು.

ಇದನ್ನೂ ಓದಿ:ಯುದ್ಧದಲ್ಲಿ ರಷ್ಯಾಗೆ ಬೆಲಾರಸ್​ ಬೆಂಬಲ ; ಅಮೆರಿಕ ಗುಪ್ತದಳ ಮಾಹಿತಿ

ABOUT THE AUTHOR

...view details