ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನಿಗಳಿಂದ ಪಾರುಮಾಡಲು ಅಫ್ಘಾನಿಸ್ತಾನದ ಪ್ರಜೆಗಳನ್ನು ಕಾಬೂಲ್ನಿಂದ ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್ ದೇಶದ ವಿಮಾನವನ್ನು ಅಪಹರಣ ಮಾಡಲಾಗಿಲ್ಲ ಎಂದು ಉಕ್ರೇನ್ ಸ್ಪಷ್ಟನೆ ನೀಡಿದೆ.
ಕಾಬೂಲ್ನಿಂದ ಜನರನ್ನು ಸ್ಥಳಾಂತರಿಸುತ್ತಿದ್ದ Ukrainian Plane ಹೈಜಾಕ್? - ಕಾಬೂಲ್
ಕಾಬೂಲ್ನಿಂದ ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್ ದೇಶದ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉಕ್ರೇನ್ ವಿಮಾನ
ಮೊನ್ನೆ ಭಾನುವಾರ ಕಾಬೂಲ್ನಿಂದ ಇರಾನ್‌ಗೆ ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್ ವಿಮಾನvನ್ನು ಅಪರಿಚಿತರು ಹೈಜಾಕ್ ಮಾಡಿದ್ದಾರೆ ಎಂದು ಇಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ತಿಳಿಸಿದ್ದರು. ಆದರೆ ಇದರ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್ನ ಅಧಿಕಾರಿಗಳು ಇದು ನಿಜವಲ್ಲ ಎಂದು ಹೇಳಿದ್ದಾರೆ.
Last Updated : Aug 24, 2021, 2:18 PM IST