ಟೋಕಿಯೊ:ಜಪಾನಿನ ಉಡಾವಣಾ ಸ್ಥಳದಲ್ಲಿ ಕೆಟ್ಟ ಹವಾಮಾನದಿಂದಾಗಿ ಈಗಾಗಲೇ ಎರಡು ದಿನ ವಿಳಂಬವಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಮಾರ್ಸ್ ಆರ್ಬಿಟರ್ ಉಡಾವಣೆಯನ್ನ ಮತ್ತಷ್ಟು ದಿನಗಳ ಕಾಲ ಮುಂದೂಡಲಾಗಿದೆ.
ಅಮಾಲ್ ಅಥವಾ ಹೋಪ್ ಎಂಬ ಕಕ್ಷೆಯು ಅರಬ್ನ ಮೊದಲ ಅಂತರಗ್ರಹ ಮಿಷನ್ ಆಗಿದೆ. ಆರಂಭದಲ್ಲಿ ದಕ್ಷಿಣ ಜಪಾನ್‌ನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ನಿಗದಿಯಾಗಿದ್ದ ಉಡಾವಣೆಯನ್ನು ಈಗಾಗಲೇ ಶುಕ್ರವಾರದವರೆಗೆ ಮುಂದೂಡಲಾಗಿತ್ತು.