ಕರ್ನಾಟಕ

karnataka

ETV Bharat / international

ಪಾಕ್​ನಲ್ಲಿ ಇಬ್ಬರು ಮಹಿಳೆಯರ ಅಪಹರಿಸಿ, ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ

ಪಾಕಿಸ್ತಾನದಲ್ಲಿ ಕಳೆದ ಆರು ವರ್ಷಗಳಲ್ಲಿ 22,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಕನಿಷ್ಠ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿದುಬಂದಿದೆ. ಈ ಪೈಕಿ ಕೇವಲ 77 ಮಂದಿಗೆ ಮಾತ್ರವೇ ಶಿಕ್ಷೆಯಾಗಿದೆ. ಅಂದರೆ ಶಿಕ್ಷೆಯ ಪ್ರಮಾಣ ಶೇ 0.3ರಷ್ಟಿದೆ!.

Two women kidnapped, gang-raped in Pakistan's Sindh
ಪಾಕ್​ನಲ್ಲಿ ಇಬ್ಬರು ಮಹಿಳೆಯರ ಅಪಹರಿಸಿ, ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ

By

Published : Feb 9, 2022, 8:55 AM IST

ಕರಾಚಿ(ಪಾಕಿಸ್ತಾನ): ಇಬ್ಬರು ಮಹಿಳೆಯರನ್ನು ಅಪಹರಿಸಿ, ಬೆತ್ತಲೆಯಾಗಿ ಮೆರವಣಿಗೆ ಮಾಡಿ ನಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಶನಿವಾರ ತಡರಾತ್ರಿ ಮಿರ್ಪುರ್ಖಾಸ್ ಜಿಲ್ಲೆಯ ನೌಕೋಟ್ ಪಟ್ಟಣದ ಬಳಿ ಟಾಂಗ್ರಿ ಸಮುದಾಯಕ್ಕೆ ಸೇರಿದ 20ಕ್ಕೂ ಹೆಚ್ಚು ಮಂದಿ ಇಬ್ಬರು ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಸ್ ಇಂಟರ್​ನ್ಯಾಷನಲ್ ವರದಿ ಮಾಡಿದೆ.

ಅಪಹರಣಗೊಂಡ ಸುಮಾರು 20 ಗಂಟೆಗಳ ನಂತರ ಮಹಿಳೆಯರನ್ನು ರಕ್ಷಿಸಲಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖಂಡ ಮೀರ್ ತಾರಿಕ್ ತಾಲ್ಪುರ್ ಸ್ಥಳಕ್ಕೆ ಧಾವಿಸಿ, ಪೊಲೀಸ್ ತುಕಡಿಗಳ ಸಹಾಯದಿಂದ ಇಬ್ಬರೂ ಮಹಿಳೆಯರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದಲ್ಲಿ ಕಳವಳ ಹುಟ್ಟಿಸುವ ಅತ್ಯಾಚಾರ ಕೇಸುಗಳು: ಕಾನೂನು ಮತ್ತು ನ್ಯಾಯ ಆಯೋಗ, ಮಾನವ ಹಕ್ಕುಗಳ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಕಳೆದ ಆರು ವರ್ಷಗಳಲ್ಲಿ 22,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಕನಿಷ್ಠ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ.

ಶಿಕ್ಷೆಯ ಪ್ರಮಾಣ ಕೇವಲ 0.3%: 22 ಸಾವಿರ ಪ್ರಕರಣಗಳಲ್ಲಿ ಕೇವಲ 77 ಮಂದಿಗೆ ಮಾತ್ರವೇ ಶಿಕ್ಷೆಯಾಗಿದೆ. ಅಂದರೆ ಶಿಕ್ಷೆಯ ಪ್ರಮಾಣ ಕೇವಲ ಶೇ 0.3ರಷ್ಟಿದೆ.

ಇದನ್ನೂ ಓದಿ:17 ವರ್ಷದ ಪತ್ನಿಯ ತಲೆ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ; ಇರಾನ್‌ನಲ್ಲಿ ಆಘಾತಕಾರಿ ಘಟನೆ

ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್‌ ಪ್ರಾಧ್ಯಾಪಕಿ ನಿದಾ ಕಿರ್ಮಾನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಅತ್ಯಾಚಾರ ಪಾಕಿಸ್ತಾನದಲ್ಲಿ ಸರ್ವೇಸಾಮಾನ್ಯ ಎಂಬಂತಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನೇ ಸಮಾಜ ದೂಷಿಸುತ್ತದೆ. ಹಿಂಸಾತ್ಮಕ ಪ್ರವೃತ್ತಿ ಪುರುಷರಲ್ಲಿ ಹೆಚ್ಚಾಗಿರುವುದನ್ನು ಇದು ಸೂಚಿಸುತ್ತದೆ' ಎಂದು ಕಳವಳ ವ್ಯಕ್ತಪಡಿಸಿದರು.

ABOUT THE AUTHOR

...view details