ಕರ್ನಾಟಕ

karnataka

ETV Bharat / international

ನಾನೇ ಆಫ್ಘನ್​ ಅಧ್ಯಕ್ಷ ಎಂದಿದ್ದ ಅಮರುಲ್ಲಾ ಸಲೇಹ್ Twitter ಖಾತೆ ಸಸ್ಪೆಂಡ್​..! - Twitter

ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಹಾಗೂ ಅವರ ಪಕ್ಷದ ಇತರರ ಅಧಿಕೃತ ಟ್ವಿಟರ್​ ಖಾತೆಗಳನ್ನು ಅಮಾನತುಗೊಳಿಸಲಾಗಿದೆ.

Amrullah Saleh
ಅಮರುಲ್ಲಾ ಸಲೇಹ್

By

Published : Aug 19, 2021, 4:29 PM IST

ಕಾಬೂಲ್​ (ಅಫ್ಘಾನಿಸ್ತಾನ): ಯಾವುದೇ ಕಾರಣಕ್ಕೂ ತಾಲಿಬಾನ್​ಗೆ ಶರಣಾಗಲ್ಲ. ನಾನೇ ಆಫ್ಘನ್ ಅಧ್ಯಕ್ಷ ಎಂದು ಹೇಳಿಕೆ ನೀಡಿದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಅಧಿಕೃತ ಟ್ವಿಟರ್​ ಖಾತೆ ಟ್ವಟರ್​ ಸಂಸ್ಥೆ ಅಮಾನತುಗೊಳಿಸಿದೆ.

ಅಮರುಲ್ಲಾ ಸಲೇಹ್ ಅವರ ಖಾತೆ ಮಾತ್ರವಲ್ಲ, ಅವರ ಕಚೇರಿ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಎಲ್ಲರ ಖಾತೆಗಳನ್ನು ಟ್ವಿಟರ್ ಸಸ್ಪೆಂಡ್ ಮಾಡಿದೆ. ಇವರೆಲ್ಲಾ ಟ್ವಿಟರ್​ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿರುವ ಟ್ವಿಟರ್​​,​ ಅಫ್ಘಾನಿಸ್ತಾನದ ಮುಂಬರುವ ಆಡಳಿತಗಾರನಾಗುವುದಾಗಿ ಅಮರುಲ್ಲಾ ಹಾಗೂ ಅವರ ಪಕ್ಷ ಹೇಳಿಕೊಂಡ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ತಾಲಿಬಾನ್​ಗೆ ಶರಣಾಗಲ್ಲ..ನಾನೇ ಅಫ್ಘಾನ್ ಅಧ್ಯಕ್ಷ ಎಂದ ಮಾಜಿ ಉಪಾಧ್ಯಕ್ಷ!

ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ ಪ್ರವೇಶಿಸುತ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ಅವರು ಅಫ್ಘಾನಿಸ್ತಾನ ತೊರೆದು ಪಲಾಯನ ಮಾಡಿದ್ದರು. ಬಳಿಕ ಟ್ವೀಟ್​ ಮಾಡಿದ್ದ ಅಮರುಲ್ಲಾ ಸಲೇಹ್, "ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಅನುಪಸ್ಥಿತಿ, ಪರಾರಿ, ರಾಜೀನಾಮೆ ಅಥವಾ ಸಾವು ಸಂಭವಿಸಿದಲ್ಲಿ ದೇಶದ ಉಪಾಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗುತ್ತಾರೆ.

ನಾನು ಪ್ರಸ್ತುತ ನನ್ನ ದೇಶದೊಳಗಿದ್ದೇನೆ. ನಾನೇ ದೇಶದ ಹಂಗಾಮಿ ಅಧ್ಯಕ್ಷ. ನಾನು ವಿಶ್ವದ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಅಫ್ಘಾನಿಸ್ತಾನದ ರಕ್ಷಣೆಗೆ ಬದ್ಧವಾಗಿದ್ದೇನೆ" ಎಂದು ಹೇಳಿದ್ದರು.

ABOUT THE AUTHOR

...view details